Site icon Vistara News

Ganeshotsav | ಡಿಜೆ ಜಪ್ತಿ ವಿರೋಧಿಸಿ ಹೊಸಪೇಟೆ ಠಾಣೆ ಎದುರು ಯುವಕರ ಪ್ರತಿಭಟನೆ

Ganeshotsav

ವಿಜಯನಗರ: ಗಣೇಶೋತ್ಸವ ಮೆರವಣಿಗೆ(Ganeshotsav) ವೇಳೆ ಡಿಜೆ ಪರಿಕರಗಳನ್ನು ಪೊಲೀಸರು ಜಪ್ತಿ ಮಾಡಿದ್ದನ್ನು ವಿರೋಧಿಸಿ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆ ಎದುರು ಸ್ಥಳೀಯ ಯುವಕರು ಪ್ರತಿಭಟನೆ ನಡೆಸಿದರು.

ಗಣೇಶ ಮೂರ್ತಿ ವಿಸರ್ಜನೆ ವೇಳೆ ನಿಯಮ ಮೀರಿ ಡಿಜೆ ಬಳಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಹೊಸಪೇಟೆ ನಗರದಲ್ಲಿ 5 ಪ್ರಕರಣ, ಹಗರಿಬೊಮ್ಮನ ಹಳ್ಳಿಯ ತಂಬ್ರಳ್ಳಿಯಲ್ಲಿ ಒಂದು ಕೇಸ್ ದಾಖಲಿಸಿ, ಡಿಜೆ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗಾಗಿ ಪೊಲೀಸರ ವೈಖರಿ ವಿರೋಧಿಸಿ, ಯುವಕರು ಪ್ರತಿಭಟನೆ ನಡೆಸಿ ಗಣೇಶೋತ್ಸವದ 5ನೇ ದಿನಕ್ಕೆ ಡಿಜೆ ಬಳಕೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಚಿವ ಆನಂದ್‌ ಸಿಂಗ್‌ ಸ್ಥಳಕ್ಕೆ ಆಗಮಿಸಿ ಯುವಕರು ಹಾಗೂ ಪೊಲೀಸರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದರು.

ಈ ವೇಳೆ ಎಸ್.ಪಿ ಡಾ. ಅರುಣ್ ಮಾತನಾಡಿ, ಡಿಜೆ ಪರವಾನಗಿ ಕುರಿತು ಸಚಿವ ಆನಂದ್ ಸಿಂಗ್ ಅವರು ಚರ್ಚಿಸಿದ್ದಾರೆ. ಕಾನೂನು ಪ್ರಕಾರ ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುವುದನ್ನು ಅವರ ಗಮನಕ್ಕೆ ತರಲಾಗಿದೆ. ನಾಳೆ 5ನೇ ದಿನದ ಗಣಪತಿಗಳ ವಿಸರ್ಜನೆಗೆ ಅವಕಾಶ ಇದೆ. ಗಣೇಶೋತ್ಸವದ ವೇಳೆ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡಬೇಕಾಗುತ್ತದೆ. ಶುಕ್ರವಾರ ನಿಯಮ ಮೀರಿ ಡಿಜೆಗಳನ್ನು ಬಳಸಿರುವವರ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ. ಇದಕ್ಕೆ ಈ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಪೋಕ್ಸೊಪ್ರಕರಣ; ಅನಾಥ ಸೇವಾಶ್ರಮ ಸಮಿತಿ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಿಮುಕ್ತಿ

Exit mobile version