Site icon Vistara News

Road Accident: ಅಪೇ ಆಟೋರಿಕ್ಷಾಕ್ಕೆ ಕಾರು ಡಿಕ್ಕಿ; ಓರ್ವ ಮಹಿಳೆ ಸಾವು

Car collided with Ape Autorickshaw in kottur taluk

ಕೊಟ್ಟೂರು: ಅಪೇ ಆಟೋರಿಕ್ಷಾಕ್ಕೆ (Autorickshaw) ಕಾರೊಂದು (Car) ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಆರು ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ತೂಲಹಳ್ಳಿ ಗ್ರಾಮದ ಕೋನನಹಳ್ಳಿ ಕ್ರಾಸ್‌ ಬಳಿ ಶುಕ್ರವಾರ ಸಂಜೆ ಜರುಗಿದೆ.

ಗೀತಮ್ಮ (42) ಮೃತ ಮಹಿಳೆ. ಅಪಘಾತದಲ್ಲಿ ಆಟೋ ಚಾಲಕ ಬೊಮ್ಮಪ್ಪ, ನೇತ್ರಮ್ಮ, ಲಕ್ಷ್ಮಮ್ಮ, ಬಸಮ್ಮ, ಮಂಗಳಮ್ಮ, ಶಾರದಮ್ಮ ಸೇರಿ ಆರು ಜನರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಲಾಗಿದೆ, ಆಟೋದಲ್ಲಿದ್ದ ಮಕ್ಕಳಿಗೆ ಗಾಯಗಳಾಗಿದ್ದು, ಕೊಟ್ಟೂರು ಆರೋಗ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version