ಕೊಟ್ಟೂರು: ಕೊಟ್ಟೂರಿನ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಲೀಲಾ ಎಸ್. ಅವರಿಗೆ ಪಟ್ಟಣದ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ (Vijayanagara News) ಜರುಗಿತು.
ಇದನ್ನೂ ಓದಿ: Gold Rate Today: ಬಂಗಾರದ ಧಾರಣೆಯಲ್ಲಿ ಇಳಿಕೆ; ಹಾಲ್‌ಮಾರ್ಕ್ ಗಮನಿಸಿ ಖರೀದಿಸಿ
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಮರೇಶ್ ಜಿ.ಕೆ. ಮಾತನಾಡಿ, ವೃತ್ತಿಗೆ ಸೇರಿದ ನಂತರ ನಿವೃತ್ತಿ ಇದ್ದೇ ಇರುತ್ತದೆ. ಆದರೆ ನಿವೃತ್ತಿ ಹೊಂದುವಾಗ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎನ್ನುವ ಸಂತೃಪ್ತಿ ನೌಕರರದಾಗಬೇಕು. ಪ್ರತಿಯೊಬ್ಬರು ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಕಾಯ್ದುಕೊಂಡು ಹೋಗಬೇಕು. ಎರಡಲ್ಲಿ ಯಾವುದಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಿವೃತ್ತಿ ಜೀವನ ಸುಖಮಯವಾಗಲಿ, ಆ ದೇವರು ಆರೋಗ್ಯವನ್ನು ಕರುಣಿಸಲಿ. ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ನಿವೃತ್ತ ಶಿರಸ್ತೇದಾರ್ ಲೀಲಾ ಎಸ್. ಅವರನ್ನು ಗೌರವಿಸಿ, ಸನ್ಮಾನಿಸಿ, ಬೀಳ್ಕೊಡಲಾಯಿತು.
ಇದನ್ನೂ ಓದಿ: IPL 2024: ರಾಜಸ್ಥಾನ್ vs ಕೆಕೆಆರ್ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ!
ಈ ಸಂದರ್ಭದಲ್ಲಿ ಶಿರಸ್ತೇದಾರ್ ಅನ್ನದಾನೇಶ ಬಿ ಪತ್ತಾರ, ರೇಖಾ ಎಸ್., ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಡಿ. ಶಿವಕುಮಾರ, ಗ್ರಾಮ ಆಡಳಿತ ಅಧಿಕಾರಿಗಳು, ಕಚೇರಿಯ ಸಿಬ್ಬಂದಿ, ಗ್ರಾಮ ಸಹಾಯಕರು ಹಾಗೂ ಇತರರು ಉಪಸ್ಥಿತರಿದ್ದರು. ಸಿ.ಮ. ಗುರುಬಸವರಾಜ ಸ್ವಾಗತಿಸಿದರು.