Site icon Vistara News

ಅಪ್ಪು ತೊಟ್ಟಿದ್ದ ಜಾಕೆಟ್‌ ಫ್ರೇಮ್‌ ಹಾಕಿಸಿಟ್ಟಿರುವ ಸಚಿವರ ಪುತ್ರ!

ಅಪ್ಪು ತೊಟ್ಟ ಜಾಕೆಟ್‌ಗೆ ವಿಶೇಷ ಕಾಳಜಿ

ವಿಜಯನಗರ : ಪವರ್‌ ಸ್ಟಾರ್‌ ಅಪ್ಪು (Power star Puneeth Rajkumar) ನಿಧನದ ಸುದ್ದಿಯನ್ನು ಇನ್ನೂ ಕನ್ನಡ ನಾಡಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನಿತ್‌ ರಾಜ್‌ಕುಮಾರ್‌ ಅಭಿಮಾನಿಗಳು ಹಗಲು ರಾತ್ರಿ ಎನ್ನದೆ ಅವರನ್ನು ನೆನೆಯುತ್ತಲೇ ಇದ್ದಾರೆ. ವಿಜಯನಗರದ ಅಭಿಮಾನಿಗಳೂ ಅಷ್ಟೇ ಈಗಲೂ ಅಪ್ಪು ನೆನಪಿಸಿಕೊಂಡು ಕಣ್ಣೀರಾಗುತ್ತಾರೆ. ಇತ್ತೀಚೆಗೆ ಅವರ ಜ್ಞಾಪಕಾರ್ಥವಾಗಿ ಪುತ್ಥಳಿ ನಿರ್ಮಿಸಿದ್ದರು. ಜಿಲ್ಲೆಯ ಹೊಸಪೇಟೆಯೊಂದಿಗೆ ಅಪ್ಪು ಅವಿನಾಭಾವ ಸಂಬಂಧ ಹೊಂದಿದ್ದು, ಇಲ್ಲಿಯ ಅಭಿಮಾನಿಗಳಿಗಂತೂ ಪವರ್‌ ಸ್ಟಾರ್‌ ಅನ್ನು ಮರೆಯಲಾಗುತ್ತಿಲ್ಲ.

ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ಹೊಸಪೇಟೆಗೆ ಆಗಾಗ ಬಂದು ಹೋಗುತ್ತಿದ್ದರಲ್ಲದೆ, ಅಭಿಮಾನಿಗಳ ಕರೆಗೆ ಸ್ಪಂದಿಸುತ್ತಿದ್ದರು. ಶೂಟಿಂಗ್‌ ಒತ್ತಡದಲ್ಲಿ ಬಂದಾಗಲೂ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಕ್ಕೆ ಕಾರಣರಾಗುತ್ತಿದ್ದರು. ಜಿಲ್ಲೆಯಲ್ಲಿ ಪುನೀತ್‌ ಅವರಿಗೆ ಅಭಿಮಾನಿಗಳ ಮಹಾಸಾಗರವೇ ಇದ್ದು, ಪುನೀತ್‌ ಅವರ ಸಿನಿಮಾ ಬಿಡುಗಡೆಯಾದರೆ ಹಬ್ಬದಂತೆಯೇ ಸಂಭ್ರಮಿಸುತ್ತಿದ್ದರು. ಅಪ್ಪು ಒಮ್ಮೆ ಇಲ್ಲಿಗೆ ಬಂದಾಗ ಅಭಿಮಾನಿಯೊಬ್ಬರಿಗೆ ಪ್ರೀತಿಯಿಂದ ಜಾಕೆಟ್‌ ನೀಡಿದ್ದು, ಅವರು ಅದನ್ನು ಸಚಿವರ ಪುತ್ರರಿಗೆ ನೀಡಿದ್ದಾರೆ. ಅದನ್ನು ಅವರು ಕಚೇರಿಯಲ್ಲಿ ಪ್ರೇಮ್‌ ಹಾಕಿಸಿಟ್ಟುಕೊಂಡು ಅಭಿಮಾನ ಮೆರೆಯುತ್ತಿದ್ದಾರೆ.

ಇದನ್ನೂ ಓದಿ | Puneeth Rajkumar: ಮೌಂಟ್ ಎವರೆಸ್ಟ್​​ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು

ಹೊಸಪೇಟೆಯ ಅಪ್ಪು ಅಭಿಮಾನಿ ಕಿಚಡಿ ವಿಶ್ವ ಎಂಬುವರಿಗೆ ಪುನೀತ್ ಜಾಕೆಟ್ ನೀಡಿದ್ದರು. ದೊಡ್ಮನೆ ಹುಡುಗನ ಪ್ರೀತಿಗೆ ಕಿಚಡಿ ವಿಶ್ವ ಪಾತ್ರರಾಗಿದ್ದರು. ಇದನ್ನು ಅವರು ಸಚಿವ ಆನಂದ್‌ ಸಿಂಗ್‌ ಅವರ ಪುತ್ರ ಸಿದ್ಧಾರ್ಥ್‌ಗೆ ಕೊಟ್ಟಿದ್ದರು. ಇದೀಗ ಸಿದ್ಧಾರ್ಥ್‌ ಜಾಕೆಟ್‌ಗೆ ಫ್ರೇಮ್ ಹಾಕಿಸಿ ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ. ಬಂದವರಿಗೆಲ್ಲಾ ಇದು ಅಪ್ಪು ತೊಟ್ಟಿದ್‌ ಜಾಕೆಟ್‌ ಎಂದು ಅಭಿಮಾನದಿಂದ ತೋರಿಸುತ್ತಿದ್ದಾರೆ.

ಇದನ್ನೂ ಓದಿ | Lucky Man Movie | ಪ್ರಭುದೇವ ಹಾಗೂ ಅಪ್ಪು ಡ್ಯಾನ್ಸ್ ಚಮತ್ಕಾರ : ಬಿಡುಗಡೆಗೆ ಸಜ್ಜಾದ ಲಕ್ಕಿ ಮ್ಯಾನ್‌

Exit mobile version