ವಿಜಯಪುರ: ಎಲ್ಲರ ನೆಚ್ಚಿನ ಅಪ್ಪು ನಿಧನರಾದ ಏಳು ತಿಂಗಳೂ ಕಳೆದರೂ ಅವರ ನೆನಪು ಮಾತ್ರ ಜನಮಾನಸದಿಂದ ಇನ್ನೂ ಹಚ್ಚ ಹಸಿರಾಗಿಯೇ ಇದೆ. ಇಲ್ಲೊಬ್ಬ ಪುನೀತ್ ಅಭಿಮಾನಿ, ಪುನೀತ್ ರಾಜಕುಮಾರ ಪೋಟೋಗಳನ್ನು ಮದುವೆ ಮಂಟಪದಲ್ಲಿ ಹಾಕಿಸಿ, ಅದರ ಎದುರೇ ಮದುವೆ ಆಗಿದ್ದಾರೆ.
ನಗರದ ಕಾಳಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದಿದೆ. ನಗರದ ಬಸವರಾಜ ಪತ್ತಾರ ಹಾಗೂ ಶೋಭಾ ಮದುವೆಯಾದ ಜೋಡಿ. ಪುನೀತ್ ರಾಜಕುಮಾರ ಅಭಿಮಾನಿಯಾಗಿರೋ ಬಸವರಾಜ ಕಕ್ಕಳಮೇಲಿ ಈ ಮುಂಚೆ ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದರು. ಅಪ್ಪು ಇಲ್ಲದ ಕಾರಣ ಅವರ ಪೋಟೋಗಳನ್ನು ವೇದಿಕೆ ಮೇಲೆ ಇಟ್ಟು ಮಾಂಗಲ್ಯಧಾರಣೆ ಮಾಡಿದ್ದಾರೆ.
ಇದಕ್ಕೂ ಮುಂಚೆ ಬಸವರಾಜ ಕಕ್ಕಳಮೇಲಿ ಪುನೀತ್ ರಾಜಕುಮಾರ ಎಲ್ಲಾ ಚಿತ್ರಗಳನ್ನು ಫಸ್ಟ್ ಶೋದಲ್ಲಿ ವೀಕ್ಷಣೆ ಮಾಡುತ್ತಿದ್ದರು. ಪುನೀತ್ ಸಮಾಧಿ ಬಳಿ ಮದುವೆ ಆಮಂತ್ರಣ ಪತ್ರಿಕೆ ಪೂಜೆ ಮಾಡಿ ನಂತರ ಎಲ್ಲರಿಗೆ ಮದುವೆ ಪತ್ರವನ್ನೂ ಕೂಡ ಹಂಚಿದ್ದರು. ಪುನೀತ್ ಮೇಲಿನ ಬಸವರಾಜ ಅಭಿಮಾನ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ | Puneeth Rajkumar: ಮೌಂಟ್ ಎವರೆಸ್ಟ್ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು