Site icon Vistara News

Vijayanagara News: ಕನ್ನಡ ಮಾಧ್ಯಮದಲ್ಲಿ ಓದಿದರೆ ವಿಜ್ಞಾನಿಗಳಾಗುವುದಕ್ಕೆ ಅಡ್ಡಿ ಇಲ್ಲ: ಇಸ್ರೋ ವಿಜ್ಞಾನಿ ಡಾ.ಬಿ.ಎಚ್‌.ಎಂ ದಾರುಕೇಶ್‌

ISRO scientist Dr BHM Darukesh Speech at hosapete

ಹೊಸಪೇಟೆ: ಕನ್ನಡ ಮಾಧ್ಯಮದಲ್ಲಿ (Kannada Medium) ಓದಿದರೆ ವಿಜ್ಞಾನಿಗಳಾಗುವುದಕ್ಕೆ (Scientist) ಅಡ್ಡಿ ಇಲ್ಲ, ಯಾವ ವಿಷಯವನ್ನು (Subject) ಆಸಕ್ತಿಯಿಂದ ಆಯ್ಕೆ ಮಾಡುತ್ತೀರೋ ಅದರತ್ತ ವಿಶೇಷ ಗಮನ ಹರಿಸಿದಾಗ ಭಾಷೆ (Language) ತೊಡಕಾಗುವುದಿಲ್ಲ ಎಂದು ಇಸ್ರೋ ವಿಜ್ಞಾನಿ ಡಾ.ಬಿ.ಎಚ್‌.ಎಂ ದಾರುಕೇಶ್‌ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಹೊಸಪೇಟೆ ತಾಲೂಕು ಘಟಕದ ವತಿಯಿಂದ ಗುರುವಾರ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ದಕ್ಷಿಣ ಧ್ರುವದೆಡೆಗೆ ಚಂದ್ರಯಾನ -3ರ ನಡಿಗೆ’ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಾವರು ಮಾತನಾಡಿದರು.

ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ನಾವು ಜ್ಞಾನಾರ್ಜನೆ ಮಾಡಲು ಹೆಚ್ಚು ಓದಬೇಕಾಗುತ್ತದೆ. ಹಲವು ವಿಷಯಗಳನ್ನು ಓದುತ್ತಲೇ ನಮ್ಮ ಭಾಷಾ ಪರಿಧಿ ವಿಸ್ತಾರವಾಗುತ್ತದೆ. ಹೀಗಾಗಿ ಆರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದರೂ ಮುಂದೆ ವಿಜ್ಞಾನಿಗಳಾಗುವುದಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ ಪ್ರಯತ್ನ ಸ್ವಲ್ಪ ಹೆಚ್ಚು ಬೇಕಾಗುತ್ತದೆ ಅಷ್ಟೇ ಎಂದು ತಿಳಿಸಿದರು.

ಇದನ್ನೂ ಓದಿ: Electric shock : ಬೆಕ್ಕು ರಕ್ಷಿಸಲು ಮರವೇರಿದ ಯುವಕನಿಗೆ ಕರೆಂಟ್‌ ಶಾಕ್‌!

ಅವಕಾಶ ಹುಡುಕುವಲ್ಲಿ ನಿಮಗೆ ನೀವೇ ಗುರುವಾಗಿರಬೇಕು. ಎಲ್ಲೆಲ್ಲಿ ಉದ್ಯೋಗ ಅವಕಾಶ ಇದೆ ಎಂಬುದನ್ನು ಓದಿನ ಜತೆಗೆ ತಿಳಿಯುತ್ತಲೇ ಇರಬೇಕು. ವ್ಯಾಸಂಗದ ಅಂತಿಮ ಹಂತಕ್ಕೆ ಬಂದಾಗ ಹಲವು ಕಡೆಗಳಿಗೆ ಉದ್ಯೋಗಕ್ಕೆ ಅರ್ಜಿ ಹಾಕಬೇಕು. ಸಂದರ್ಶನ ಎದುರಿಸಬೇಕು. ಆದರೆ ನಿಮ್ಮ ಆಯ್ಕೆಯ ಉದ್ಯೋಗಕ್ಕೇ ಹೋಗಬೇಕು. ಆಗ ಈ ಮೊದಲು ನೀವು ಎದುರಿಸಿದಂತಹ ಸಂದರ್ಶನಗಳು ನಿಮ್ಮ ನೆರವಿಗೆ ಬರುತ್ತವೆ ಎಂದು ಅವರು ಕಿವಿಮಾತು ಹೇಳಿದರು.

ವಿಜ್ಞಾನ ಎಂಬುದು ನಮ್ಮ ಜನರ ಜೀವನ ಮಟ್ಟ ಸುಧಾರಿಸುವ ಸಾಧನ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿದ ಸಾಧನೆ ಭಾರತಕ್ಕಷ್ಟೇ ಸೀಮಿತವಲ್ಲ. ಬದಲಿಗೆ ಜಗತ್ತಿಗೇ ಉಪಯೋಗವಾಗುತ್ತದೆ. ವಿಜ್ಞಾನ ಹಾಗೂ ವಿಜ್ಞಾನಿಗಳು ಸದಾ ಮನುಕುಲಕ್ಕಾಗಿಯೇ ಕೆಲಸ ಮಾಡುವವರಾಗಿರುತ್ತಾರೆ ಎಂದು ತಿಳಿಸಿದರು.

ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: World Cup 2023: ವಿಶ್ವಕಪ್‌ಗೆ ತಂಡ ಘೋಷಿಸಿದ ಪಾಕಿಸ್ತಾನ; ಯಾರು ಇನ್‌, ಯಾರು ಔಟ್?

ಈ ಸಂದರ್ಭದಲ್ಲಿ ಬಿಇಒ ಚನ್ನಬಸಪ್ಪ ಮಗ್ಗದ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ಕಾರ್ಯದರ್ಶಿ ಟಿ.ಎಂ. ಉಷಾರಾಣಿ, ಕಾರ್ಯಕ್ರಮ ಸಂಯೋಜಕಿ ಮಾಧವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್‌, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version