ವಿಜಯನಗರ : ಜಿಲ್ಲೆಯ ಹಲವೆಡೆಯಲ್ಲಿ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿ ಶಾಲೆ ಹೊರಭಾಗದ ಶೆಡ್‌ನ ಶೀಟ್‌ಗಳು ಹಾರಿ ಹೋಗಿವೆ.
ಇದನ್ನೂ ಓದಿ | ವಿಜಯನಗರ ಸಾಮ್ರಾಜ್ಯ ಬಗ್ಗೆ ವೀರ ಸಾವರ್ಕರ್ ಹೀಗೆ ಬರೆದಿದ್ದರು!
ಬೆಳಗಿನ ಜಾವ ಬೀಸಿರುವ ಭಾರಿ ಪ್ರಮಾಣದ ಗಾಳಿಯಿಂದ 6ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದರೆ ಒಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ಆಗಿದೆ. ಬೆಳಗ್ಗೆ ಯಾರೂ ಇಲ್ಲದ ವೇಳೆ ದುರ್ಘಟನೆ ಸಂಭವಿಸಿರುವುದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಕಮಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ | Heavy Rains | ಮಳೆಗೆ ಬೆಳೆ ನಷ್ಟ; ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ