ಕೂಡ್ಲಿಗಿ: ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ (75th Republic Day) ತಹಸೀಲ್ದಾರ್ ಎಂ. ರೇಣುಕಾ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವದಲ್ಲಿ ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಭಾರತದ ಇತಿಹಾಸದಲ್ಲೇ ಗಣರಾಜ್ಯೋತ್ಸವ ದಿನ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸುಮಾರು 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಅರಿತಿದ್ದು,ಅವರಿಗೆ ಅವಶ್ಯವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Weather: ಕಡಿಮೆ ಆಯಿತೇ ಚಳಿ? ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ?
ತುಂಗಭದ್ರಾ ನದಿಯಿಂದ ಪಾವಗಡಕ್ಕೆ ಕುಡಿಯುವ ನೀರಿನ ಬಹುಗ್ರಾಮ ಯೋಜನೆಯಿಂದ ಕೂಡ್ಲಿಗಿ ಪಟ್ಟಣ ಕೈಬಿಡಲಾಗಿತ್ತು, ಅದನ್ನ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಪಟ್ಟಣಕ್ಕೂ ಕುಡಿಯುವ ನೀರು ಒದಗಿಸಲು ಸುಮಾರು 68 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಿ ಟೆಂಡರ್ ಮುಗಿದಿದೆ, ಶ್ರೀಘ್ರದಲ್ಲಿ ಕಾಮಾಗಾರಿ ಆರಂಭವಾಗಲಿದೆ ಎಂದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಶಾಸಕರು ಸನ್ಮಾನಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?
ಈ ವೇಳೆ ತಾಪಂ ಇಒ ವೈ. ರವಿಕುಮಾರ್, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಪಿ.ಚಂದ್ರು, ಸಚಿನ್ ಕುಮಾರ್, ಕೆ.ಈಶಪ್ಪ, ಸಿರಬಿ ಮಂಜುನಾಥ, ಲಕ್ಷ್ಮೀದೇವಿ, ಚೌಡಮ್ಮ, ಸರಸ್ವತಿ, ರೇಣುಕಾ ದುರುಗೇಶ್, ಲೀಲಾವತಿ ಪ್ರಭಾಕರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.