ಹೊಸಪೇಟೆ: 2023-24ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮೆಕ್ಕೆಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ನವಣೆ, ರಾಗಿ ಈರುಳ್ಳಿ, ಟೊಮೊಟೊ ಬೆಳೆಗಳಿಗೆ ಬೆಳೆ ವಿಮೆ ಬಿಡುಗಡೆಯಾಗಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 85.76 ಕೋಟಿ ರೂ. ಬೆಳೆ ವಿಮೆ (Vijayanagara News) ಬಿಡುಗಡೆಯಾಗಿದೆ.
ಹಡಗಲಿ ತಾಲೂಕಿಗೆ 1071.72 ಲಕ್ಷ ರೂ., ಹಗರಿಬೊಮ್ಮನಹಳ್ಳಿ ತಾಲೂಕಿಗೆ 256.62 ಲಕ್ಷ ರೂ., ಹರಪನಹಳ್ಳಿ ತಾಲೂಕಿಗೆ 6101.63 ಲಕ್ಷ ರೂ., ಹೊಸಪೇಟೆ ತಾಲೂಕಿಗೆ 38.05 ಲಕ್ಷ ರೂ., ಕೊಟ್ಟೂರು ತಾಲೂಕಿಗೆ 491.81 ಲಕ್ಷ ರೂ., ಕೂಡ್ಲಿಗಿ ತಾಲೂಕಿಗೆ 616.85 ಲಕ್ಷ ರೂ. ಬಿಡುಗಡೆಯಾಗಿದೆ.
ಇದನ್ನೂ ಓದಿ: Job News: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಆಯ್ಕೆ ಹೇಗಿರುತ್ತದೆ? ಪರೀಕ್ಷೆ ಸ್ವರೂಪವೇನು? Complete Details
ಹಡಗಲಿ ತಾಲೂಕಿನಲ್ಲಿ 3382, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 708, ಹರಪನಹಳ್ಳಿ ತಾಲೂಕಿನಲ್ಲಿ 20394, ಹೊಸಪೇಟೆ ತಾಲೂಕಿನಲ್ಲಿ 212, ಕೊಟ್ಟೂರು ತಾಲೂಕಿನಲ್ಲಿ 2402, ಕೂಡ್ಲಿಗಿ ತಾಲೂಕಿನಲ್ಲಿ 2412 ರೈತರು ಈ ಬೆಳೆ ವಿಮೆ ಪಡೆಯುತ್ತಿದ್ದಾರೆ.
ಬೆಳೆ ವಿಮೆಗೆ ನೋಂದಾಯಿಸಿದ ರೈತರು ಬೆಳೆ ವಿಮಾ ಕಂತು ತುಂಬಿದ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಲು ಕೋರಿದೆ. ಬೆಳೆ ವಿಮಾ ಜಮೆ ಆಗದಿದ್ದಲ್ಲಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ:Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್
ಪ್ರಸಕ್ತ ಸಾಲಿನಲ್ಲಿಯೂ ಸಹ ಉತ್ತಮ ಮಳೆ ಆಗುವುದೆಂಬ ಅಂದಾಜಿರುವುದರಿಂದ ಎಲ್ಲಾ ರೈತ ಬಾಂಧವರು ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.