ಕೊಟ್ಟೂರು: ರಾಷ್ಟ್ರದಲ್ಲಿ ಅಂಚೆ ಇಲಾಖೆ (Department of Post) ಈ ಮೊದಲು ಸಂಪರ್ಕ ಸಾಧನೆಗೆ ಮಾತ್ರ ಮೀಸಲಾಗಿತ್ತು. ಈ ಇಲಾಖೆ ಇದೀಗ ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಜಗತ್ತಿನಲ್ಲಿಯೇ (World) ಅತಿ ಹೆಚ್ಚು ಗ್ರಾಹಕರನ್ನು (Customers) ಹೊಂದಿರುವುದು ಹೆಮ್ಮೆಯ ವಿಷಯ ಎಂದು ಬಳ್ಳಾರಿಯ ಅಂಚೆ ಅಧೀಕ್ಷಕ ವಿ.ಎಲ್. ಚಿತ್ಕೋಟಿ ತಿಳಿಸಿದರು.
ತಾಲೂಕಿನ ಹರಾಳು ಗ್ರಾಮದಲ್ಲಿ ಅಂಚೆ ಕಚೇರಿ ವತಿಯಿಂದ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಪ್ರತಿ ಊರುಗಳಲ್ಲಿ ಅಂಚೆ ಕಚೇರಿಗಳಿದ್ದು, 1,56,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಕೇಂದ್ರ ಸರ್ಕಾರವು ದೇಶದಲ್ಲಿ ಒಟ್ಟು 27 ಹೊಸ ಅಂಚೆ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಕೊಟ್ಟಿದೆ, ಅದರಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಹೊಸ ಅಂಚೆ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Asian Games 2023: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ; ಲಂಕಾ ವಿರುದ್ಧ ರೋಚಕ ಜಯ
ಕೂಡ್ಲಿಗಿ ಉಪ ಅಂಚೆ ನಿರೀಕ್ಷಕ ರಾಜಪ್ಪ ಬಾರಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖಂಡ ಶೆಟ್ಟಿ ತಿಂದಪ್ಪ, ಸ್ಥಳೀಯ ಮುಖಂಡರಾದ ಗುರುಮೂರ್ತಿ, ಬಣಕಾರ ಹಾಲಪ್ಪ ಮಾತನಾಡಿದರು.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಅಂಚೆ ಪಾಲಕರಾದ ರಾಜಶೇಖರ್, ರಾಜಶೇಖರ ಶೆಟ್ಟಿ, ಕೆ.ಒ. ನಾಗರಾಜ, ಪೃಥ್ವಿ ಹಾಗೂ ವಿ. ಬನ್ನೇಶ್, ಹನುಮಂತಪ್ಪ, ಶಿವಕುಮಾರ, ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿ. ಮಂಜುನಾಥ್ ಸ್ವಾಗತಿಸಿದರು. ದೀಪಿಕಾ, ಯಶೋಧ ವಂದಿಸಿದರು.