Site icon Vistara News

Vijayanagara News: ಹರಪನಹಳ್ಳಿಯ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Vijayanagara News Annual Meeting of tapcms at Harpanahalli

ಹರಪನಹಳ್ಳಿ: ಹರಪನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (TAPCMS) ಪ್ರಸಕ್ತ ಸಾಲಿಗೆ 487364.45 ಲಕ್ಷ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷೆ ಎಚ್. ನೇತ್ರಾವತಿ ಹೇಳಿದರು.

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಆಹಾರ ಧಾನ್ಯ ಮತ್ತು ಸಗಟು ನಿಯಂತ್ರಿತ ಪಡಿತರ ಹಾಗೂ ಇತರೆ ವ್ಯವಹಾರವನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ರೈತರಿಗೆ ರಸಗೊಬ್ಬರ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸಬೇಕಾಗಿದೆ. ಕಾರಣ ಸಂಘದ ಎಲ್ಲಾ ಸದಸ್ಯರುಗಳು ಮತ್ತು ತಾಲೂಕಿನ ಎಲ್ಲಾ ರೈತರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿ ಮಾಡಲು ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ

ಸಂಘದಲ್ಲಿ ರೈತರಿಗೆ ಮತ್ತು ಸದಸ್ಯರುಗಳ ಅನುಕೂಲಕ್ಕಾಗಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡಲು ಪ್ರಾರಂಬಿಸಲಾಗವುದು, ಸರ್ಕಾರದ ಷೇರು ಬಂಡವಾಳ ಸರಿದೂಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಷೇರು ಹಣವನ್ನು ಸಂಘದಲ್ಲಿ ತೊಡಗಿಸುವಂತೆ ಸದಸ್ಯಲ್ಲಿ ಮನವಿ ಮಾಡಿದರು.

ಪ್ರಭಾರಿ ಕಾರ್ಯದರ್ಶಿ ಎಚ್.ತಿರುಪತಿ ಮಾತನಾಡಿ, ಸರ್ವ ಸದಸ್ಯರ ಮಹಾಜನ ಸಭೆಯಲ್ಲಿ ವರ್ಷಕ್ಕೆ ಒಂದೇ ಬಾರಿ ಚರ್ಚಿಸಲು ಅವಕಾಶವಿದ್ದು ಅದ್ದರಿಂದ ಈ ಸಭೆಯಲ್ಲಿ ನಡೆದ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಚುನಾಯಿತ ಸದಸ್ಯರು ಸಹಕರಿಸಿದರೆ ಈ ಸಭೆಗೆ ಅರ್ಥ ವಿರುತ್ತದೆ ಇಲ್ಲವಾದರೆ ನೀವು ಓದಿ ಹೇಳಿದ ವಿಷಯಕ್ಕೆ ನಾವು ಮಾನ್ಯತೆ ನೀಡಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಬಳಿಕ ಹಿರಿಯ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿದರು.

ಇದನ್ನೂ ಓದಿ: ICC World Cup: ಏಕದಿನ ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ

ಸಭೆಯಲ್ಲಿ ಉಪಾಧ್ಯಕ್ಷ ಕುಲಮಿ ಅಬ್ದುಲ್ಲಾ, ನಿರ್ದೇಶಕರಾದ ಬಿ.ಕೆ.ಪ್ರಕಾಶ, ಎಚ್.ತಿಮ್ಮನಾಯ್ಕ, ಎಲ್.ಬಿ.ಹಾಲೇಶನಾಯ್ಕ, ಪಿ.ಪ್ರೇಮಕುಮಾರ, ಗಿಡ್ಡಳ್ಳಿ ನಾಗರಾಜ, ತಳವಾರ ಮಂಜಪ್ಪ, ಬಿ.ರೇವಣಸಿದ್ದಪ್ಪ, ಎಂ.ವಿ.ಕೃಷ್ಣಕಾAತ, ಕೆ.ವಿರುಪಾಕ್ಷಪ್ಪ, ವಿ.ಜಿ. ಪ್ರಕಾಶಗೌಡ, ಯು.ಹನುಮಂತಪ್ಪ, ಮಂಜುಳಾ ಮೂರ್ತಿ ಹಾಗೂ ಚಿಕ್ಕೇರಿ ಬಸಪ್ಪ, ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಡಿ.ಅಬ್ದುಲ್ ರಹಿಮಾನ್ ಸಾಹೇಬ್, ಆಲಮರಸಿಕೇರಿ ಪರುಶುರಾಮಪ್ಪ, ಕಂಚಿಕೇರಿ ಜಯಲಕ್ಷೀ. ಗುಂಡಗತ್ತಿ ನೇತ್ರಾವತಿ, ಸೋಗಿ ಇಬ್ರಾಹಿಂ, ಶ್ರಿಕಾಂತ, ಶಿವಮೂರ್ತಿಯ್ಯ ತಿರುಕಪ್ಪ, ಪಿ.ಪರುಶುರಾಮ, ಸೇರಿದಂತೆ ಇತರರು ಇದ್ದರು.

Exit mobile version