ಹರಪನಹಳ್ಳಿ: ತಾಲೂಕಿನ ಅರಸಿಕೆರೆ ಹೋಬಳಿಯ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಪುರಾತನ ಬಾವಿಯ ಪುನಶ್ಚೇತನಗೊಳಿಸುವ ವೇಳೆ ಶಿವಲಿಂಗ, ಬಸವಣ್ಣ ದೇವರ ಮೂರ್ತಿಗಳು ಹಾಗೂ ದೇವರ ಪೂಜೆ ಸಾಮಗ್ರಿಗಳು (Vijayanagara News) ಪತ್ತೆಯಾಗಿವೆ.
ಸುಮಾರು 500 ವರ್ಷಗಳ ಹಳೆಯ ಬಾವಿ ಇದಾಗಿದ್ದು, ಪುಣಭಗಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪುನಶ್ಚೇತನ ಕಾಮಗಾರಿ ನಡೆಯುತ್ತಿತ್ತು. ಬಾವಿ ಹೂಳು ತೆಗೆಯುವ ವೇಳೆ ಪುರಾತನ ಶಿವಲಿಂಗ, ಬಸವಣ್ಣ ದೇವರ ಮೂರ್ತಿಗಳು ಹಾಗೂ ದೇವರ ಪೂಜೆ ಸಾಮಗ್ರಿಗಳು ಪತ್ತೆಯಾಗಿವೆ.
ಇದನ್ನೂ ಓದಿ: Ballari News: ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು: ಬಿ.ಎಸ್.ಲೋಕೇಶ್ ಕುಮಾರ್
‘ಪುರಾತನ ಬಾವಿಗೆ ಪುಷ್ಕರಣಿಯ ಸ್ಪರ್ಶ ನೀಡಲಾಗಿದೆ. ಇಲ್ಲಿ ದೊರಕಿರುವ ಪ್ರಾಚೀನ ಕಾಲದ ಸಾಮಾಗ್ರಿಗಳು, ಧಾರ್ಮಿಕ ನಂಬಿಕೆಗಳನ್ನು ಜೀವಂತವಾಗಿಸಿದೆ. ಇಲ್ಲಿ ದೊರೆತಿರುವ ಪುರಾತನ ಕಾಲದ ಸಾಮಾಗ್ರಿಗಳ ಕುರಿತು ಅಧ್ಯಯನ ನಡೆಯಬೇಕು. ಅವುಗಳ ರಕ್ಷಣೆ ಆಗಬೇಕು’ ಎಂದು ಗ್ರಾಮಸ್ಥರಾದ ಶ್ರೀನಿವಾಸ ನಾಯಕ ಹಾಗೂ ತಿಪ್ಪೇಶಪ್ಪ ಆಗ್ರಹಿಸಿದ್ದಾರೆ.