Site icon Vistara News

Vijayanagara News: ಸಂಗಮೇಶ್ವರ ಗ್ರಾಮದಲ್ಲಿ ಎನ್ನೆಸ್ಸೆಸ್‌ ವಿಶೇಷ ಶಿಬಿರದ ಸಮಾರೋಪ

Concluding ceremony of nss special camp at Sangameshwara village

ಕೊಟ್ಟೂರು: ಪಟ್ಟಣದ ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯದ ವತಿಯಿಂದ ಸಂಗಮೇಶ್ವರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ (NSS) ವಿಶೇಷ ಶಿಬಿರದ ಸಮಾರೋಪ ಸಮಾರಂಭ (Vijayanagara News) ಜರುಗಿತು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಕುಮಾರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಮಹತ್ವ ಕುರಿತು ತಿಳಿಸಿದರು.

ಇದನ್ನೂ ಓದಿ: Ballari News: ಸಂವಿಧಾನದ ಮೌಲ್ಯ, ಆಶಯಗಳ ಜಾಗೃತಿಗೆ ಎಲ್ಲರೂ ಕೈಜೋಡಿಸಿ: ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರ

ಭಾಗೀರಥಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ, ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗುರುಬಸವರಾಜ ಎ.ಎಂ.ಎಂ., ಉಪನ್ಯಾಸಕ ಮರುಳಪ್ಪ ಕೆ. ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ಜರುಗಿತು.

ಇದನ್ನೂ ಓದಿ: Yuva Nidhi Scheme: ಬೆಳಗಾವಿಯಲ್ಲಿ ಅತಿ ಹೆಚ್ಚು ನಿರುದ್ಯೋಗಿ ಯುವ ಜನತೆ!

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸಿ ಬಿ. ರಜತ್, ನಿರ್ದೇಶಕರಾದ ವೀಣಾ ಬಸವರಾಜ, ರಚನಾ ರಜತ್ ಹಾಗೂ ಎಚ್. ರಾಜಪ್ಪ, ಸಂಯೋಜಕ ಶಶಿಕಿರಣ ಕೆ., ಕೊಟ್ರೇಶ ಪಿ.ಕೆ.ಎಂ., ಗ್ರಾಮದ ಮುಖಂಡರಾದ ಶಿವಪ್ಪ, ಬಿ. ರಾಮನಗೌಡ, ಬಣಕಾರ ಸಿದ್ದಪ್ಪ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಶಿಬಿರಾರ್ಥಿಗಳು, ಇತರರು ಉಪಸ್ಥಿತರಿದ್ದರು.

Exit mobile version