ಹೊಸಪೇಟೆ: ನಗರದಲ್ಲಿ ಎಸ್ಎಫ್ಎಕ್ಸ್ ಚಾಪ್ ಹಾಗೂ ವಿವೇಕಶ್ರೇಯಾಲಾಪ ಎಂಬ ಆಡಿಯೋ ನಿರ್ಮಾಣ ಸಂಸ್ಥೆ ಹಾಗೂ ಸಂಗೀತ ಶಾಲೆಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ (Vijayanagara News) ನೀಡಿದರು.
ಬಳಿಕ ನಗರದ ವಿಜಯನಗರ ಕ್ರೀಡಾ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಡಿ. ವಿ ಪರಮಶಿವಮೂರ್ತಿ ಮಾತನಾಡಿ, ಅಚಲ ವಿಹಾನ್ ದಂಪತಿಗಳು ನಮ್ಮ ಜಿಲ್ಲೆಯಲ್ಲಿ ಈ ರೀತಿಯಾದ ಅತ್ಯಾಧುನಿಕ ಸ್ಟುಡಿಯೋ ಹಾಗೂ ಸಂಗೀತ ಶಾಲೆಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ನಿಮಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಇದನ್ನೂ ಓದಿ: Vijayanagara News: ವಿಜಯನಗರ ಜಿಲ್ಲೆಯಲ್ಲಿ ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆಗೆ ಡಿಸಿ ಕಟ್ಟುನಿಟ್ಟಿನ ಸೂಚನೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬರಹಗಾರ್ತಿ, ನಟಿ ಹಾಗೂ ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ಮಾತನಾಡಿ, ಇಂದಿನ ಪೀಳಿಗೆಯ ಮಕ್ಕಳಿಗೆ ಸಂಗೀತವೆಂಬುದು ಅವಶ್ಯಕ, ಈ ಸ್ಟುಡಿಯೋದಿಂದ ಕಲಾವಿದರಿಗೆ ಬಹಳಷ್ಟು ಅನುಕೂಲವಾಗಲಿದೆ ಹಾಗೂ ಹೊಸ ಪ್ರತಿಭೆಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ರಾಗಿ, ಜೋಳ ಖರೀದಿ ಪ್ರಕ್ರಿಯೆ ಆರಂಭ
ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಕೃಷ್ಣ ಸುಜನ್, ಅಂತರಾಷ್ಟ್ರೀಯ ಬರಹಗಾರ್ತಿ ಲಾಟಿ ಫಿನ್ಕ್ಲೇರ್, ಚಿತ್ರ ನಿರ್ದೇಶಕ ಮುರಳಿಧರ್ ಗಿಡಿಜಾಲ, ವಿಹಾನ್ ಅಭ್ಯುದಯ, ಅಚಲ, ಶರಣಸ್ವಾಮಿ, ಕಲಾವಿದರಾದ ಅಭಿನಂದನ್, ಭರತ್ ಹಾಗೂ ಇತರರು ಉಪಸ್ಥಿತರಿದ್ದರು.