ಹರಪನಹಳ್ಳಿ: ಶತಮಾನ ಪೂರೈಸಿದ ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (Government School) 2001-2002 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಶಾಲೆಯ ಮಕ್ಕಳಿಗೆ ಉಚಿತ ನೋಟ್‌ಬುಕ್ (Note Book), ಪೆನ್ (Pen) ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಲೆಯ 2001-2002 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮಾತನಾಡಿ, ಪ್ರತಿ ವರ್ಷ ನಮ್ಮ ಬ್ಯಾಚ್ ವಿದ್ಯಾರ್ಥಿಗಳು, ಮಕ್ಕಳ ಕಲಿಕೆಗೆ ಸಹಾಯಕವಾಗಲು 5, 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಪೆನ್ ವಿತರಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಗೌರವಿಸಿ, ಸನ್ಮಾನಿಸಿದರು.
ಇದನ್ನೂ ಓದಿ: Bihar Caste Census: ಬಿಹಾರದ ಶೇ.34 ಕುಟುಂಬಗಳ ಆದಾಯ 6000 ರೂ.ಗಿಂತ ಕಡಿಮೆ!
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಖಾ, ಮುಖ್ಯ ಶಿಕ್ಷಕ ಅಂಜಿನಪ್ಪ, ಶಿಕ್ಷಕರಾದ ಎಂ.ಎಂ. ಚಂದ್ರಶೇಖರಯ್ಯ, ನೀಲಗುಂದ ಕೊಟ್ರೇಶ್, ಮಂಜುನಾಥ ಆಚಾರ್, ಪರಮೇಶ್ವರನಾಯ್ಕ, ವೀರಭದ್ರಯ್ಯ, ಸಿದ್ದಮ್ಮ, ಶಾರದ, ಶಕುಂತಲಮ್ಮ, ವಿನೋದಮ್ಮ, ಎನ್.ಜಿ. ಚಿದಾನಂದಪ್ಪ, ಸಲೀಂ ಎಚ್, ಶಿವಯೋಗಿ, ಎ.ಎಸ್. ಗುಡುಗೂರು, ಎಚ್. ಶೈಲಾ, ಎಂ. ರತ್ನಮ್ಮ, ಪಿ. ನಾಗರತ್ನ, ಮಂಜಪ್ಪ ಬಣಕಾರ್ ಸೇರಿದಂತೆ 2001-2002 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.