ಕೂಡ್ಲಿಗಿ: ರಾಜ್ಯದಲ್ಲಿ ಬರದಿಂದ (Drought) ರೈತರು ತತ್ತರಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಕಣ್ಣುಮುಚ್ಚಿ ಕುಳಿತಿರುವುದು ಅತ್ಯಂತ ದುರಂತ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ್ ದೂರಿದರು.
ತಾಲೂಕಿನ ಕೆರೆಕಾವಲರ ಹಟ್ಟಿಯಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಬರ ಅಧ್ಯಯನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದು ಕಾಣದ ಭೀಕರ ಬರಗಾಲವನ್ನು ನಾವು ಕಾಣಬಹುದಾಗಿದೆ. ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಬರೀ ಕುರ್ಚಿ ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದೆ. ಅದರ ಜತೆ ಗ್ಯಾರಂಟಿಗಳಿಗೆ ಹಣ ಹೊಂದಿಸುವುದರಲ್ಲಿಯೇ ಸಾಕಾಗಿದೆ, ಇನ್ನು ಬರ ಪರಿಸ್ಥಿತಿಗೆ ಅವರಲ್ಲಿ ಉತ್ತರವೇ ಇಲ್ಲವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ ಯಶಸ್ವಿ ಪರೀಕ್ಷೆ; ನೌಕಾಪಡೆಗೆ ಭೀಮ ಬಲ!
ಮಳೆಯಿಲ್ಲದೆ ಬೆಳೆ ಇಲ್ಲದೆ ರೈತರು ಹಾಗೂ ಕೂಲಿ ಕಾರ್ಮಿಕರು ಬೇರೆಡೆ ಕೂಲಿ ಅರಸಿ ಗುಳೇ ಹೋಗುತ್ತಿದ್ದಾರೆ. ಆದರೆ ಸರ್ಕಾರ ಇಲ್ಲಿವರೆಗೂ ಯಾವುದೇ ಆರ್ಥಿಕ ಸಹಾಯ ಮಾಡದೇ ಕೈ ಕಟ್ಟಿ ಕೂತಿದೆ. ರೈತರ ಗೋಳನ್ನು ಸರ್ಕಾರ ಅರಿಯಲು ವಿಫಲವಾಗಿದೆ ಎಂದು ತಿಳಿಸಿದರು.
ಬರ ಅಧ್ಯಯನ ತಂಡದಲ್ಲಿ ಮಠಾಧೀಶರ ಧರ್ಮ ಪರಿಷತ್ ಅಧ್ಯಕ್ಷ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಕೊಟ್ಟೂರಿನ ಡೋಣುರು ಚಾನುಕೋಟಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಇದನ್ನೂ ಓದಿ: Skincare tips in winter : ಈ ಸಮಯ ತ್ವಚೆ ಶುಷ್ಕಮಯ! ಎಚ್ಚರ ವಹಿಸಿದರೆ ಆನಂದಮಯ!
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬ್ಯಾಳಿ ವಿಜಯಕುಮಾರ ಗೌಡ,ಹಗರಿ ಬೊಮ್ಮನಹಳ್ಳಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪ.ಪಂ. ಸದಸ್ಯರಾದ ಸಿರಬಿ ಮಂಜುನಾಥ, ಕಾಲ್ಚೆಟ್ಟಿ ಈಶಪ್ಪ ಸೇರಿದಂತೆ ರೈತ ಮುಖಂಡರು ಇದ್ದರು.