ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಎಸ್.ಎಂ.ಸಿ.ಕೆ. ಪದವಿಪೂರ್ವ ಕಾಲೇಜಿನಲ್ಲಿ ಶಾರದಾ ಪೂಜೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು (Vijayanagara News) ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಪ್ರೊ. ಎನ್.ಲಿಂಗಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾನು ಓದುವ ಸಮಯದಲ್ಲಿ ಪಟ್ಟ ಕಷ್ಟ ಇತರರಿಗೂ ಬರಬಾರದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮದ ಎಲ್ಲರ ಸಹಕಾರದಿಂದ ಕಾಲೇಜು ಆರಂಭ ಮಾಡಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತ ವಾಗಬಾರದು, ಪ್ರತಿಯೊಬ್ಬರೂ ನೈತಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: World Pulses Day 2024: ವಿಶ್ವ ಬೇಳೆ-ಕಾಳುಗಳ ದಿನ; ಏನಿದರ ಮಹತ್ವ?
ಕಾರ್ಯಕ್ರಮದಲ್ಲಿ ಮುಖಂಡ ಪ್ರಶಾಂತ್ ಪಾಟೀಲ್ ಹಾಗೂ ಪ್ರಾಧ್ಯಾಪಕ ಡಾ.ಭೀಮಪ್ಪ ಮಾತನಾಡಿದರು.
ಇದೇ ವೇಳೆ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಿ, ಸನ್ಮಾನಿಸಲಾಯಿತು. ಪ್ರಾಚಾರ್ಯ ಆರ್. ಕುಮಾರ್ ನಾಯ್ಕ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ಈ ಸಂದರ್ಭದಲ್ಲಿ ಭೂ ದಾನಿ ಉಮಾದೇವಿ ಜಾತಯ್ಯ, ಆಡಳಿತಾಧಿಕಾರಿ ಸೋಮಶೇಖರ್ ಕಿಚಡಿ, ಪೂಜಾರ್ ಮರಿಯಪ್ಪ, ಎ.ಏಚ್.ಉಮೇಶ್, ಪ್ರೌಢಶಾಲೆಯ ಮುಖ್ಯಗುರು ಅರಸೀಕೆರೆ ಸಿದ್ದರಾಮನಗೌಡ, ತೌಡೂರು ಬಿ. ರುದ್ರೇಶ್, ಅಣಜಿಗೆರೆ ಕೆ. ಶಿವಯೋಗಿ, ಪಿ. ದುರುಗೇಶ್, ಈಶಪ್ಪ, ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.