Site icon Vistara News

Vijayanagara News: ಹರಪನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

Free health checkup camp for students at Harpanahalli

ಹರಪನಹಳ್ಳಿ: ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ಜೆಸಿಐ ವೀಕ್ ಅಂಗವಾಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಯಲ್ಲಿ (Dr. B.R. Ambedkar Residential School) ವಿದ್ಯಾರ್ಥಿಗಳಿಗೆ (Students) ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು (Free health checkup camp) ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜೆಸಿಐ ಹರಪನಹಳ್ಳಿ ಸ್ಫೂರ್ತಿ ಸಂಸ್ಥೆಯ ಅಧ್ಯಕ್ಷ ಚಲವಾದಿ ಪರಶುರಾಮ್ ಮಾತನಾಡಿ, , ಜೆಸಿಐ ಸಂಸ್ಥೆ ನಿಸ್ವಾರ್ಥವಾಗಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Glass Bridge: ಈಗ ಭಾರತದ ಅತಿ ಉದ್ದದ ಗಾಜಿನ ಸೇತುವೆ ಮೇಲೆ ನಡೆದಾಡಿ!

ಬೆಳಗ್ಗೆಯೇ ಆರಂಭವಾದ ಶಿಬಿರ ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಂಡಿತು. ಒಟ್ಟು ಶಾಲೆಯ 100 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ನೇತ್ರ ತಜ್ಞೆ ಡಾ.ಸಂಗೀತ ಭಾಗವತ್ ಮತ್ತು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಆದಿತ್ಯ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಡಾ. ಸಂಗೀತ ಭಾಗವತ್, ಡಾ. ಆದಿತ್ಯ, ರವೀಂದ್ರ ಅವರು ಮಾತನಾಡಿದರು.

ಇದನ್ನೂ ಓದಿ: Sanju Samson: ರಾಹುಲ್​ ಆಗಮನ; ತವರಿಗೆ ಮರಳಿದ ಸಂಜು ಸ್ಯಾಮ್ಸನ್​

ಈ ಸಂದರ್ಭದಲ್ಲಿ ಮೋರಗೇರಿ ಹೇಮಣ್ಣ, ಶರತ್ ಚಂದ್ರ, ಇರ್ಷಾದ್ ಭಾಷ, ಯು.ನಾರಾಯಣ, ಮುಖ್ಯ ಶಿಕ್ಷಕ ಶಿವಕುಮಾರ , ಪುಷ್ಪ, ನರಸಮ್ಮ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version