ಕೊಟ್ಟೂರು: ತಾಲೂಕಿನ ಪ್ರಸಿದ್ಧ ಗಾಣಗಟ್ಟೆ ಶ್ರೀ ಮಾಯಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ (Vijayanagara News) ನೆರವೇರಿತು.
ರಥೋತ್ಸವಕ್ಕೂ ಮುನ್ನ ಶ್ರೀ ಮಾಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ರಥದ ಬಳಿ ತಂದು ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಶ್ರೀ ದೇವಿಯ ಪಟವನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ದಾವಣಗೆರೆ ಮಹೇಶ ಅವರು 3,01,101 ರೂ.ಗಳಿಗೆ ಪಡೆದರು.
ಇದನ್ನೂ ಓದಿ: Happiest Country: 2024ರಲ್ಲಿ ಅತಿ ಹೆಚ್ಚು ಸಂತೋಷದ ದೇಶವಿದು! ಭಾರತಕ್ಕೆ ಎಷ್ಟನೇ ಸ್ಥಾನ ನೋಡಿ
ನೆರೆದಿದ್ದ ಸಾವಿರಾರು ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು, ಉತ್ತುತ್ತಿಗಳನ್ನು ಎಸೆದು ಶ್ರದ್ಧಾ ಭಕ್ತಿಯಿಂದ ನಮಿಸಿ, ಇಷ್ಠಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಇದನ್ನೂ ಓದಿ: IPL 2024: ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್; ಕರ್ನಾಟಕ ಇದೆಯೇ?
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು, ಶ್ರೀ ಮಾಯಮ್ಮ ದೇವಿಗೆ ಪೂಜೆ ಸಲ್ಲಿಸಿ, ರಥೋತ್ಸವವನ್ನು ಕಣ್ತುಂಬಿಕೊಂಡರು.