Site icon Vistara News

Vijayanagara News: ಹಂಪಿ ಉತ್ಸವಕ್ಕೆ ಪೂರ್ವ ಸಿದ್ಧತಾ ಸಭೆ

Vijayanagara DC M.S. Diwakar Spoke in Hampi utsav Preparatory meeting

ಹೊಸಪೇಟೆ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವದ (Hampi Utsav) ಸಿದ್ಧತೆಯ ಹಿನ್ನಲೆಯಲ್ಲಿ ಬುಧವಾರ ಡಿಸಿ ಎಂ.ಎಸ್. ದಿವಾಕರ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಹಂಪಿ ಉತ್ಸವದ ಸಿದ್ಧತೆಯ ಹಿನ್ನಲೆಯಲ್ಲಿ ಡಿಸಿ ಎಂ.ಎಸ್. ದಿವಾಕರ್‌, ಆಯಾ ಇಲಾಖೆಯ ಅಧಿಕಾರಿಗಳಿಗೆ ನಾನಾ ಕಾರ್ಯ ಹಂಚಿಕೆ ಮಾಡಿದರು. ಈಗಾಗಲೇ ಆರಂಭಗೊಂಡ ನಾನಾ ಕಾರ್ಯ ಪ್ರಗತಿಯ ಮಾಹಿತಿ ಪಡೆದರು.

ವೇದಿಕೆಯ ಕಾರ್ಯಕ್ರಮಗಳು, ಶುಚಿತ್ವ ಕಾರ್ಯ, ಆಹಾರ ಸರಬರಾಜು, ಪಾಸುಗಳ ವಿತರಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಡಿಸಿ ಮಾಹಿತಿ ಪಡೆದರು.

ಇದನ್ನೂ ಓದಿ: SSLC, II PUC Exam: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಹಂಪಿ ಉತ್ಸವವು ಮಕ್ಕಳನ್ನು ಸಹ ಒಳಗೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹಂಪಿ, ಹಂಪಿ ಉತ್ಸವ ಎಂದರೇನು ಎಂಬುದರ ಬಗ್ಗೆ ಮಕ್ಕಳಿಗೆ ಸಹ ತಿಳಿಸುವ ಕಾರ್ಯ ಮಾಡಲು ಮತ್ತು ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಯಾಗಿ ಈ ಬಾರಿ ಉತ್ಸವದಲ್ಲಿ ಶ್ವಾನ ಪ್ರದರ್ಶನ ಮತ್ತು ಎತ್ತಿನ ಪ್ರದರ್ಶನಕ್ಕೆ ಸಹ ಆಯೋಜಿಸಿದ್ದು, ನೋಂದಣಿ ಪ್ರಕ್ರಿಯೆ ಮತ್ತು ಸಿದ್ಧತೆ ಮಾಡಬೇಕು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರತಿ ವೇದಿಕೆಗೆ ತಲಾ ಒಬ್ಬರು ತಹಸೀಲ್ದಾರ್‌, ತಲಾ ಒಬ್ಬರು ಕಂದಾಯ ನಿರೀಕ್ಷಕರು ಹಾಗೂ ತಲಾ ಮೂವರು ಗ್ರಾಮ ಆಡಳಿತ ಅಧಿಕಾರಿಗಳನ್ನು ನಿಯೋಜಿಸಿ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುವಲ್ಲಿ ಅಚ್ಚುಕಟ್ಟುತನ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಆಯಾ ಇಲಾಖಾವಾರು ನಾನಾ ಮಾಹಿತಿಯ ಪ್ರದರ್ಶನಕ್ಕೆ ಮತ್ತು ಹಳೆಯ ಕೃಷಿ ಉಪಕರಣಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: PSI Exam Hall Ticket: ಪಿಎಸ್‌ಐ ಮರುಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ

ಲಕ್ಷಾಂತರ ಸಂಖ್ಯೆಯಲ್ಲಿ ಜನರು ಉತ್ಸವಕ್ಕೆ ಆಗಮಿಸುತ್ತಾರೆ. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಲ್ಲಲ್ಲಿ ಸಿಸಿಟಿವಿ ಅಳವಡಿಸುವುದರ ಬಗ್ಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಹಂಪಿ ಪರಿಸರದ ಅಲ್ಲಲ್ಲಿ ಇನ್ನು ಸಹ ಅಶುಚಿತ್ವ ಕಾಣುತ್ತಿದೆ. ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಸ್ವಚ್ಚತಾ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸಲು ಕ್ರಮ ವಹಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Karnataka Weather: ಇನ್ನೊಂದು ವಾರ ಬೆಳಗ್ಗೆ ಬಿಸಿಲು, ರಾತ್ರಿ ಚಳಿ! ದಕ್ಷಿಣ ಒಳನಾಡಲ್ಲಿ 5 ಡಿಗ್ರಿ ಬಿಸಿಲು ಹೆಚ್ಚಳ?

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version