ಹೊಸಪೇಟೆ: ವಿದ್ಯಾರ್ಥಿಗಳು ತರಬೇತಿ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿಂದುಸ್ತಾನಿ ಸಂಗೀತ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ದರಾಮಯ್ಯ ಮಠಪತಿ ಗೋರಟಾ (Vijayanagara News) ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ಶಿಬಿರವನ್ನು ತಂಬೂರಿ ಮೀಟುವ ಮೂಲಕ ಉದ್ಘಾಟಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗವು ನಾಡಿನ ಇತರೆ ಸಂಗೀತ ವಿಭಾಗಗಳ ಮಾತೃ ಸಂಸ್ಥೆಯಾಗಬೇಕು. ಅನುಭವಿ ಸಂಗೀತ ವಿದ್ವಾಂಸರು ತಮ್ಮ ಅನುಭವಸಾರವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಅವರ ಸಂಗೀತ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಇದನ್ನೂ ಓದಿ: Karnataka Budget 2024: ರಾಜ್ಯ ಬಜೆಟ್‌ನಲ್ಲಿ ಯಾವ ಜಿಲ್ಲೆಗೆ ಏನು ಸಿಕ್ಕಿದೆ?; ಇಲ್ಲಿದೆ ಮಾಹಿತಿ
ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ಮಾತನಾಡಿ, ಸಂಗೀತವು ಮಾನವನ ಬದುಕಿಗೆ ಸರ್ವವ್ಯಾಪಿಯ ಪ್ರತೀಕ. ಸಂಗೀತವು ಮನಸ್ಸನ್ನು ಮೃದುಗೊಳಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ವಿರಕ್ತಮಠ ಮಾತನಾಡಿದರು.
ಹಂಪಿ ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜಯದೇವಿ ಜಂಗಮಶೆಟ್ಟಿ ಆಶಯ ನುಡಿಗಳನ್ನಾಡಿದರು.
ಇದನ್ನೂ ಓದಿ: Karnataka Budget Session 2024: ಆಸ್ತಿ ತೆರಿಗೆ ವಸೂಲಿ 3ಡಿ ಡ್ರೋನ್ ಐಡಿಯಾ! ಮಹಿಳಾ ಸ್ವಸಹಾಯ ಗುಂಪಿಗೂ ಕೆಲಸ
ಈ ಸಂದರ್ಭದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.