Site icon Vistara News

Vijayanagara News: ಹೊಸಪೇಟೆಯಲ್ಲಿ ಹೂವು ಎರಚಿ ಹೋಳಿ ಆಚರಣೆ; ನೈಸರ್ಗಿಕ ಬಣ್ಣವೇ ಅಚ್ಚುಮೆಚ್ಚು ಎಂದ ಮಂದಿ!

Holi celebration in Hosapete

ಹೊಸಪೇಟೆ: ಬಣ್ಣದ ಹಬ್ಬ ಹೋಳಿಯನ್ನು ನಗರದ ಬಲ್ಡೋಟಾ ಪಾರ್ಕ್‌ನಲ್ಲಿ (Vijayanagara News) ಸೋಮವಾರ ಪತಂಜಲಿ ಪರಿವಾರದ ನೂರಾರು ಜನರು ಬಣ್ಣ ಬಣ್ಣದ ಹೂಗಳಿಂದ ಓಕುಳಿ ಆಡುವ ಮೂಲಕ ಹೋಳಿ ಹಬ್ಬವನ್ನು (Holi celebration) ವಿಶೇಷವಾಗಿ ಆಚರಿಸಿದರು.

ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಪ್ರಭಾರಿ ಭವರ್‌ಲಾಲ್‌ ಆರ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪತಂಜಲಿ ಪರಿವಾರದ ನೂರಾರು ಜನರು ಹೂವಿನ ಪಕಳೆಗಳನ್ನು ಪರಸ್ಪರ ಎರಚಿ, ಹೋಳಿಯ ಶುಭಾಶಯ ವಿನಿಮಯ ಮಾಡಿದರು. ಕೆಲವರು ನೈಸರ್ಗಿಕ ಬಣ್ಣವನ್ನು ಸಹ ಹಚ್ಚಿ ಸಂಭ್ರಮಪಟ್ಟರು.

ಇದನ್ನೂ ಓದಿ: Bajaj CNG Bike:‌ ಜೂನ್‌ನಲ್ಲಿ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆ; ಇದರ ಬಗ್ಗೆ ನಿಮಗೆಷ್ಟು ಗೊತ್ತು?

ರಾಸಾಯನಿಕ ಬಣ್ಣ ಬೇಡ

ರಾಸಾಯನಿಕ ಬಣ್ಣ ಬಳಸುವುದರಿಂದ ಹಲವಾರು ಕಾಯಿಲೆಗಳು ಅದರಲ್ಲೂ ಮುಖ್ಯವಾಗಿ ಚರ್ಮಕ್ಕೆ ಅಪಾಯ ಇರುವುದು ಈಗಾಗಲೇ ಸಾಬೀತಾಗಿದೆ. ಅದರ ಬದಲು ಬಣ್ಣ ಬಣ್ಣದ ಹೂವಿನ ಪಕಳೆಗಳಿಂದಲೇ ಓಕುಳಿ ಆಡುವುದು ಸಾಧ್ಯವಿದೆ. ಇಲ್ಲಿ ಅದನ್ನು ಮಾಡುವ ಮೂಲಕ ಹೊಸಪೇಟೆ ಇತರ ಕಡೆಗಳಿಗೂ ಮಾದರಿಯಾಗಿದೆ ಎಂದು ಭವರಲ್‌ಲಾಲ್‌ ಆರ್ಯ ತಿಳಿಸಿದರು.

ನಮ್ಮ ಆಚರಣೆಗಳು ಪ್ರಕೃತಿಗೆ ಪೂರಕವಾಗಿದ್ದಾಗ ಪರಿಸರ ಶುದ್ಧವಾಗಿರುತ್ತದೆ, ನಮ್ಮ ಆರೋಗ್ಯವೂ ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.

ಬೆಳಗ್ಗೆ 5.15ರಿಂದ 6.45 ರವರೆಗೆ ಪ್ರತಿನಿತ್ಯದಂತೆ ಯೋಗಾಭ್ಯಾಸ ನಡೆದ ಬಳಿಕ ಹೋಳಿ ಆಚರಣೆ ನಡೆಯಿತು. ಈ ವೇಳೆ ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಫ್‌.ಟಿ.ಹಳ್ಳಿಕೇರಿ, ಬಳ್ಳಾರಿ ಪ್ರಭಾರಿ ರಾಜೇಶ್ ಕಾರ್ವಾ, ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಎಚ್‌. ಶ್ರೀನಿವಾಸ ರಾವ್, ಮಂಗಳಮ್ಮ, ಡಾ. ಮಲ್ಲಿಕಾರ್ಜುನ, ಶಿವಮೂರ್ತಿ, ಅಶೋಕ್ ಚಿತ್ರಗಾರ್‌, ಅನಂತ ಜೋಷಿ ಸೇರಿದಂತೆ ವಿವಿಧ ಯೋಗ ಕೇಂದ್ರಗಳ ಸಂಚಾಲಕರು ಹಾಗೂ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: IPL 2024 : ಐಪಿಎಲ್​ ಮ್ಯಾಚ್​ ಇದೆ, ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಬೇಡಿ, ಹೋಗಬೇಡಿ

ಸ್ವಾತಂತ್ರ್ಯ ಉದ್ಯಾನದಲ್ಲಿ ಹೋಳಿ ಆಚರಣೆ

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಹ ನಿತ್ಯದ ಯೋಗಾಭ್ಯಾಸದ ಬಳಿಕ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ನೈಸರ್ಗಿಕ ಬಣ್ಣಗಳನ್ನು ಬಳಸಿ, ಹೋಳಿ ಹಬ್ಬ ಆಚರಿಸಲಾಯಿತು. ಈ ವೇಳೆ ಸಂಚಾಲಕ ಶ್ರೀರಾಮ, ಚಂದ್ರಿಕಾ, ಶೈಲಜಾ, ರಾಜಶೇಖರ, ವೀರಣ್ಣ, ಪಾಂಡುರಂಗ, ಮಾರುತಿ ಪೂಜಾರ, ಸುಜಾತಾ, ಹೇಮಾ, ನೇತ್ರಾ, ಜಗದೀಶ, ಬಾಲಕೃಷ್ಣ, ಶಿವರಾಮ ಹಾಗೂ ಇತರರಿದ್ದರು.‌

Exit mobile version