ಕೂಡ್ಲಿಗಿ: ಮಹಿಳೆಯೊಬ್ಬರು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ಹಣ (Money) ಹಾಗೂ ಮೊಬೈಲ್ (Mobile) ಇದ್ದ ಬ್ಯಾಗ್ ಅನ್ನು (Bag) ಅವರಿಗೆ ಮರಳಿಸುವ ಮೂಲಕ ಆಟೋ ಚಾಲಕರೊಬ್ಬರು (Auto Driver) ಮಾನವೀಯತೆ ಮೆರೆದಿದ್ದಾನೆ.
ಘಟನೆಯ ಹಿನ್ನಲೆ
ಪಟ್ಟಣದ ಆಟೋ ಚಾಲಕ ನಂಜುಂಡ ಎಂಬುವವರು ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಎಸ್‌ಬಿಐ ಬ್ಯಾಂಕ್ ಆಟೋ ನಿಲ್ದಾಣಕ್ಕೆ ಆಟೋ ಚಲಾಯಿಸಿಕೊಂಡು ಹೋಗುತ್ತಿರುವಾಗ ರಸ್ತೆಯಲ್ಲಿ ಬ್ಯಾಗ್ ಬಿದ್ದಿರುವುದನ್ನು ಗಮನಿಸಿದ್ದಾರೆ.
ಆಟೋ ನಿಲ್ಲಿಸಿ ಬ್ಯಾಗ್ ತಗೆದುಕೊಂಡು ಹೋಗಿದ್ದಾನೆ. ನಂತರ ಆಟೋ ನಿಲ್ದಾಣದ ಬಳಿ ಹೋಗಿ ಬ್ಯಾಗ್ ಬಿಚ್ಚಿ ನೋಡಿದಾಗ ಅದರಲ್ಲಿ 28 ಸಾವಿರ ಹಣ, ಬೆಲೆ ಬಾಳುವ ಮೊಬೈಲ್, ಬ್ಯಾಂಕ್ ಪಾಸ್ ಬುಕ್ ಇರುವುದನ್ನು ಗಮನಿಸಿದ್ದಾನೆ. ಆ ಬ್ಯಾಗ್ ತಾಲೂಕಿನ ಇಮಾಡಾಪುರ ನಾಗಮ್ಮ ಎನ್ನುವರ ಬ್ಯಾಗ್ ಎಂದು ಖಚಿತಪಡಿಸಿಕೊಂಡಿದ್ದಾನೆ.
ಇದನ್ನೂ ಓದಿ: Koppala News: ಗಂಗಾವತಿಯ ಆದಿಮಾನವರ ನೆಲೆ ಪ್ರದೇಶಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ
ಬಳಿಕ ಬ್ಯಾಗ್‌ನಲ್ಲಿದ್ದ ಮೊಬೈಲ್‌ಗೆ ಕರೆ ಬಂದಾಗ ಆಟೋ ಡ್ರೈವರ್ ನಂಜುಂಡ ಸ್ವೀಕರಿಸಿ, ಹಣದ ಬ್ಯಾಗ್ ನನ್ಬ ಬಳಿ ಸುರಕ್ಷಿತವಾಗಿ ಇದೆ, ಬ್ಯಾಗ್ ನ ವಾರುಸುದಾರರಾದ ನಾಗಮ್ಮ ಅವರನ್ನು ಕರೆದುಕೊಂಡು ಬರಲು ತಿಳಿಸಿ, ಅವರಿಗೆ ಹಣದ ಬ್ಯಾಗನ್ನು ಮರಳಿಸಿ ಮಾನವೀಯತೆ ಮೆರೆದಿದ್ದಾನೆ.
ಚಾಲಕ ನಂಜುಂಡ ಪ್ರಮಾಣಿಕತೆಗೆ ನಾವು ಮುಕ್ತಕಂಠದಿಂದ ಹೊಗಳಬೇಕಿದೆ, ತನಗೆ ಬಡತನವಿದ್ದರು ಇನ್ನೊಬ್ಬರ ಹಣವನ್ನು ಅತ್ಯಂತ ಪ್ರಾಮಾಣಿಕವಾಗಿ ಮರಳಿಸಿರುವುದು ಇಡೀ ಆಟೋ ಸಂಘಕ್ಕೆ ಗೌರವ ತಂದಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮಯೂರ ಮಂಜು ತಿಳಿಸಿದ್ದಾರೆ.
ಇದನ್ನೂ ಓದಿ: KPSC Recruitment: 230 ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
ಪಟ್ಟಣದ ಎಸ್‌ಬಿಐ ಬ್ಯಾಂಕ್ ನಿಂದ 28 ಸಾವಿರ ಹಣ ಡ್ರಾ ಮಾಡಿಕೊಂಡು ಊರಿಗೆ ಮರಳುವಾಗ ಹಣ ಹಾಗೂ ಪಾಸ್‌ಬುಕ್ ನ ಬ್ಯಾಗ್ ಬೀಳಿಸಿಕೊಂಡು ಹೋಗಿದ್ದು, ನನ್ನ ಗ್ರಾಮಕ್ಕೆ ಹೋಗಿ ಎಚ್ಚೆತ್ತುಕೊಂಡು ಗಾಬರಿಯಾಗಿದ್ದೆ. ಆದರೆ ಪೋನ್ ಮುಖಾಂತರ ಮಾತನಾಡಿ ನಂಜುಂಡ ಎನ್ನುವ ಆಟೋ ಚಾಲಕ ನನಗೆ ಬ್ಯಾಗ್ ಸಿಕ್ಕಿದೆ ನೀವು ಆತಂಕ ಪಡಬೇಡಿ ಎಂದು ಸಮಾಧಾನ ಮಾಡಿ, ನನಗೆ ಹಣ ಮರಳಿಸಿದ್ದು ತುಂಬಾ ಖುಷಿಯಾಗಿದೆ. ಇಂದಿನ ಕಾಲದಲ್ಲೂ ಇಂತಹ ಪ್ರಾಮಾಣಿಕ ವ್ಯಕ್ತಿ ನೋಡಿ ನನಗೆ ಮಾತೇ ಹೊರಡಲಿಲ್ಲ.
-ಇಮಾಡಾಪುರ ನಾಗಮ್ಮ, ಇಮಾಡಾಪುರ ಗ್ರಾಮ, ಕೂಡ್ಲಿಗಿ.