Site icon Vistara News

Vijayanagara News: ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ; 48.32 ಲಕ್ಷ ರೂ. ಸಂಗ್ರಹ

Hundi Count of Sri Guru Basaveswaraswamy Temple in Kottur

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ದೇವಸ್ಥಾನದ 6 ದೊಡ್ಡ ಹುಂಡಿ ಪೆಟ್ಟಿಗೆ, 6 ಚಿಕ್ಕ ಹುಂಡಿ ಪೆಟ್ಟಿಗೆ ಸೇರಿ ಒಟ್ಟು 12 ಹುಂಡಿ ಪೆಟ್ಟಿಗೆಯ ಹಣ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 48,32,441 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಇಒ ಕೃಷ್ಣಪ್ಪ ತಿಳಿಸಿದರು.

ಇದನ್ನೂ ಓದಿ: Dark chocolate v/s Milk chocolate: ಯಾವ ಚಾಕೊಲೇಟ್‌ ಆರೋಗ್ಯಕ್ಕೆ ಸೂಕ್ತ?

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮಕರ್ತ ಸಿ.ಎಚ್.ಎಂ ಗಂಗಾಧರ್, ಅಧೀಕ್ಷಕ ಆಂಜನೇಯಲು ಮತ್ತು ದೇವಸ್ಥಾನದ ಸಿಬ್ಬಂದಿ, ಬ್ಯಾಂಕಿನ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version