Site icon Vistara News

Vijayanagara News: ಎರಡು ದಿನಗಳ ಗುಡೇಕೋಟೆ ಉತ್ಸವಕ್ಕೆ ವಿಧ್ಯುಕ್ತ ಚಾಲನೆ

Kudligi MLA Dr. N.T. Srinivas Inaugurated by of two days Gudekote utsav in Gudekote

ಕೂಡ್ಲಿಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ (Vijayanagara News) ಇವರ ಸಹಯೋಗದಲ್ಲಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಶನಿವಾರ ಸಂಜೆ ಎರಡು ದಿನಗಳ ಗುಡೇಕೋಟೆ ಉತ್ಸವಕ್ಕೆ (Gudekote utsav) ವಿಧ್ಯುಕ್ತ ಚಾಲನೆ ದೊರೆಯಿತು.

ಗುಡೇಕೋಟೆಯ ಒನಕೆ ಓಬವ್ವ ವೇದಿಕೆಯಲ್ಲಿ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್‌ ಉತ್ಸವಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: Money Guide: EPF vs PPF; ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

ಬಳಿಕ ಮಾತನಾಡಿದ ಅವರು, ನುಡಿದಂತೆ ನಡೆದ ಶಾಸಕರೆಂದು ತಮ್ಮನ್ನು ಸಾರ್ವಜನಿಕರು ಒಪ್ಪಿಕೊಂಡಿದ್ದು, ಇದರಿಂದ ಬಹಳ ಸಂತಸವಾಗಿದೆ. ಗುಡೇಕೋಟೆ ಉತ್ಸವವು ದಾಖಲೆಯ ರೀತಿಯಲ್ಲಿ ನಡೆಯುವಂತೆ ಸಾರ್ವಜನಿಕರು ತಿಳಿಸಿದ್ದರು, ಅದರಂತೆ ಉತ್ಸವ ನಡೆಸಲಾಗಿದೆ ಎಂದ ಅವರು, ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಗುಡೇಕೋಟೆಯನ್ನು ಪ್ರವಾಸಿ ತಾಣನ್ನಾಗಿಸಲು ಪ್ರಯತ್ನಿಸುವೆ. ಗುಡೇಕೋಟೆ ಅಭಿವೃದ್ಧಿಗೆ ಸರ್ಕಾರದಿಂದ 3 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Yadgiri News: ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಾಯಕ: ಶರಣಗೌಡ ಕಂದಕೂರು

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಮಾತನಾಡಿ, ಗುಡೇಕೋಟೆ ಉತ್ಸವವು ಹಂಪಿ ಉತ್ಸವವನ್ನು ನೆನಪಿಸುವ ಹಾಗೆ ನಡೆಯುತ್ತಿರುವುದು ಸಂತಸ ತಂದಿದೆ. ಇದರ ರೂವಾರಿಯಾದ ಶಾಸಕರ ಶ್ರಮವು ಶ್ಲಾಘನೀಯವಾಗಿದೆ ಎಂದರು.

ವೀರವನಿತೆ ಒನಕೆ ಓಬವ್ವನ ಶೌರ್ಯ, ಸಾಹಸ ಹೇಗೆ ಅಜರಾಮರವಾಗಿದೆಯೋ ಅದೇ ರೀತಿ ಈ ಉತ್ಸವವು ಇತಿಹಾಸ ಪುಟಗಳಲ್ಲಿ ದಾಖಲಾಗುವುದು ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ ಮಾತನಾಡಿದರು.

ಇದನ್ನೂ ಓದಿ: Tumkur News: ವಿಜೃಂಭಣೆಯ ಪಾವಗಡದ ಶ್ರೀ ಶನಿ ಮಹಾತ್ಮ ದೇವರ ಬ್ರಹ್ಮರಥೋತ್ಸವ

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿಬಾಬು ಬಿ.ಎಲ್., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಮ್‌ ಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಕೂಡ್ಲಿಗಿ ತಹಸೀಲ್ದಾರ್‌ ರಾಜು ಫಿರಂಗಿ, ಕೂಡ್ಲಿಗಿಯ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಒನಕೆ ಓಬವ್ವ ವಂಶಸ್ಥರಾದ ರಾಜಣ್ಣ, ಪಾಳೆಗಾರ ವಂಶಸ್ಥರಾದ ಶಿವರಾಜ ವರ್ಮ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version