Site icon Vistara News

Vijayanagara News: ಉಜ್ಜಯಿನಿ ಸದ್ಧರ್ಮ ಪೀಠವನ್ನು ಪ್ರವಾಸಿ ತಾಣವಾಗಿಸಲು ಯೋಜನೆ: ಶಾಸಕ ಡಾ.ಎನ್.ಟಿ. ಶ್ರೀನಿವಾಸ್‌

Jagadguru Shri Marulasidda Shivacharyara punyasmaranotsava and deepotsava inauguration at ujjaini

ಕೂಡ್ಲಿಗಿ: ಉಜ್ಜಯಿನಿ ಸದ್ಧರ್ಮ ಪೀಠವನ್ನು (Ujjain Saddharma Peetha) ಪ್ರವಾಸಿ ತಾಣವಾಗಿಸುವ ಯೋಜನೆಯೊಂದಿಗೆ ಸರ್ಕಾರದ (Government) ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್‌ ಹೇಳಿದರು.

ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಲಿಂ.ಜಗದ್ಗುರು ಶ್ರೀ ಮರುಳಸಿದ್ದ ಶಿವಾಚಾರ್ಯರ ಪುಣ್ಯ ಸಂಸ್ಮರಣೋತ್ಸವ, ಲಕ್ಷ ದೀಪೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಧರ್ಮವನ್ನು ಮೀರಿ ಸಮಾಜದಲ್ಲಿನ ಎಲ್ಲರನ್ನೂ ಒಂದೇ ಭಾವದಿಂದ ಕಂಡಿರುವುದು ಸದ್ಧರ್ಮ ಪೀಠ. ಶ್ರೀ ಪೀಠಕ್ಕೆ ಜರಿಮಲಿ ಪಾಳೆಗಾರರಾದಿಯಾಗಿ ಅನೇಕರು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: Upcoming Movies 2024: 2024ರ ಬಹು ನಿರೀಕ್ಷಿತ ಬಾಲಿವುಡ್ ಚಲನಚಿತ್ರಗಳಿವು!

ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಾನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಜ್ಜಯಿನಿ ಸದ್ಧರ್ಮ ಪೀಠದಿಂದ ಅಕ್ಷರ ಹಾಗೂ ಅನ್ನ ದಾಸೋಹ ಎಂದಿಗೂ ನಡೆಯುತ್ತಿದೆ. ಪೀಠದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇದಕ್ಕೆ ಸರ್ಕಾರದಿಂದ ಅನುದಾನವೂ ಅಗತ್ಯವಾಗಿದ್ದು, ಶಾಸಕ ಶ್ರೀನಿವಾಸ ಅವರು ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಅನುದಾನವನ್ನು ಶೀಘ್ರ ತರುವಂತಾಗಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ನೇಮರಾಜನಾಯ್ಕ, ಬಿ.ಪಿ.ಹರೀಶ್, ಬಿ.ದೇವೇಂದ್ರಪ್ಪ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ, ಎಸ್.ವಿ.ರಾಮಚಂದ್ರಪ್ಪ, ಜ್ಞಾನಗುರು ವಿದ್ಯಾಪೀಠ ಕಾರ್ಯದರ್ಶಿ ಎಂಎಂಜೆ ಹರ್ಷವರ್ಧನ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: Snake in bed : ಬೆಡ್‌ ಶೀಟ್‌ ಒಳಗೆ ನಾಗಪ್ಪ ಬುಸ್‌; ಮನೆಯವರು ಜಸ್ಟ್‌ ಮಿಸ್‌! video ಇದೆ!

ಕಾರ್ಯಕ್ರಮದಲ್ಲಿ ಪ್ರತಿಭಾವಂತ ಯೋಗಪಟುಗಳು ಯೋಗ ಪ್ರದರ್ಶಿಸಿದರು. ಲಿಂ.ಜಗದ್ಗುರು ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿಗಳ ಭಾವಚಿತ್ರಕ್ಕೆ ಎಲ್ಲರೂ ಪುಷ್ಪನಮನ ಅರ್ಪಿಸಿದರು.

Exit mobile version