ಕೊಟ್ಟೂರು: ಪಟ್ಟಣದ ಕೋಟೆ ಭಾಗದ ಪೂರ್ವದ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಜಗದ್ಗುರು ಶ್ರೀ ರೇಣುಕಾಚಾರ್ಯ ಭಗವತ್ಪಾದರ ಮೂರ್ತಿಗಳ ಜೋಡಿ ರಥೋತ್ಸವವು ಶುಕ್ರವಾರ ಸಂಜೆ ವಿಜೃಂಭಣೆಯಿಂದ (Vijayanagara News) ಜರುಗಿತು.
ರಥೋತ್ಸವಕ್ಕೂ ಮುನ್ನ ಉಭಯ ಸ್ವಾಮಿಗಳ ಉತ್ಸವ ಮೂರ್ತಿಗಳನ್ನು ಆಯಾಗಾರ ಬಳಗದವರು ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಉತ್ಸವ ಮೂರ್ತಿಗಳನ್ನು ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ಶ್ರೀಸ್ವಾಮಿ ಪಟಾಕ್ಷಿ ಹರಾಜು ಮಾಡಲಾಯಿತು. ಹರಾಜಿನಲ್ಲಿ ಹಳ್ಳಿ ಗಂಗಮ್ಮ ಅವರು 1,50.000 ರೂ ಗಳಿಗೆ ಪಡೆದರು.
ಇದನ್ನೂ ಓದಿ: Air India : ಸೇಫ್ಟಿ ಫಸ್ಟ್; ಏರ್ ಇಂಡಿಯಾಗೆ 80 ಲಕ್ಷ ದಂಡ
ಬಳಿಕ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ನೆರೆದಿದ್ದ ನೂರಾರು ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು, ಉತ್ತುತ್ತಿಗಳನ್ನು ಎಸೆದು ಶ್ರದ್ಧಾ ಭಕ್ತಿಯಿಂದ ನಮಿಸಿ, ಇಷ್ಠಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.