ಹೊಸಪೇಟೆ: ಒತ್ತಡದ ನಡುವೆಯೂ ತಮ್ಮ ಆರೋಗ್ಯದ (Health) ಬಗ್ಗೆ ಪತ್ರಕರ್ತರು (Journalists) ಗಮನ ಹರಿಸುವುದು ಇಂದಿನ ಅನಿವಾರ್ಯ ಎಂದು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರ ಜಿಲ್ಲಾ ಘಟಕ ಹಾಗೂ ದಾವಣಗೆರೆಯ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇದರ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ನಾವು ನಿತ್ಯ ವಾಕಿಂಗ್, ವ್ಯಾಯಾಮ ಮಾಡುತ್ತೇವೆ. ಇದರಿಂದ ಆರೋಗ್ಯವಾಗಿ ಇದ್ದೇವೆ ಎಂದು ಮೈಮರೆಯುವುದಲ್ಲ. ನಾವು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಬೇಕು. ಈ ನಿಟ್ಟಿನಲ್ಲಿ ಕಾನಿಪ ವಿಜಯನಗರ ಜಿಲ್ಲಾ ಘಟಕ, ನಿಜಕ್ಕೂ ಉತ್ತಮ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: US Open 2023: ಯುಎಸ್ ಓಪನ್ ಜಯದ ಬಳಿಕ ವಿಶೇಷ ಟಿ ಶರ್ಟ್ ಧರಿಸಿ ಮನ ಗೆದ್ದ ಜೋಕೊವಿಕ್
ಜಿ.ಪಂ ಸಿಇಒ ಸದಾ ಶಿವಪ್ರಭು ಮಾತನಾಡಿ, ಇಂದಿನ ಬದಲಾದ ಜೀವನ ಶೈಲಿ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ಮಲಗುವ ವೇಳೆಯಲ್ಲಿ ಬೆಳಗ್ಗೆ ವಾಕಿಂಗ್, ವ್ಯಾಯಮ ಮಾಡಿಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮಲಗಿರುತ್ತೇವೆ. ಬೆಳಗ್ಗೆ ಕೆಲಸದ ಒತ್ತಡದಲ್ಲಿ ಕೈ ಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವುದು ಪ್ರತಿಯೊಬ್ಬರಿಗೆ ಅನಿವಾರ್ಯವಾಗಿದೆ ಎಂದರು.
ಶಿಬಿರದಲ್ಲಿ ಸಂಘದ ಅಧ್ಯಕ್ಷ ಪಿ. ಸತ್ಯನಾರಾಯಣ, ಸಂಘದ ರಾಜ್ಯ ಸಮಿತಿ ಸದಸ್ಯ ಪಿ. ವೆಂಕೋಬ ಮಾತನಾಡಿದರು.
ಬಳಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ, ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‌ನ ಸೀನಿಯರ್ ಎಕ್ಸಿಕ್ಯೂಟಿವ್ ಪ್ರಸನ್ನ ಕುಮಾರ್ ಎ.ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಅನೂಪ್ ಕುಮಾರ್, ಬುಡ್ಡಿ ಬಸವರಾಜ, ಶ್ರೀನಿವಾಸ, ಇಂದಿರ ಕಲಾಲ್, ಭೀಮನಾಯ್ಕ, ಅನಂತ ಪದ್ಮನಾಭ ರಾವ್, ಭೀಮರಾಜ್, ಸಂಜಯ್ ಕುಮಾರ್, ಬಾಬು ಕುಮಾರ್, ಎಸ್.ಎಂ.ಮನೋಹರ್, ಎಸ್.ಎಂ. ರೇಖಾ ಪ್ರಕಾಶ್ ಹಾಗೂ ಎಚ್.ವೆಂಕಟೇಶ್, ಜಯಪ್ಪ ರಾಥೋಡ್, ಸುರೇಶ್ ಚವ್ಹಾಣ್, ಮಂಜುನಾಥ ಹಿರೇಮಠ, ಪಾಂಡುರಂಗ ಜಂತ್ಲಿ, ಕೆ.ಬಿ.ಖಾವಸ್, ಕಾಕುಬಾಳು ವೀರಭದ್ರಪ್ಪ ಇತರರು ಇದ್ದರು.
ಇದನ್ನೂ ಓದಿ: Viral Video: ಸದ್ದು ಮಾಡಬೇಡಿ… ಹುಲಿಗಳು ನಿದ್ದೆ ಮಾಡುತ್ತಿವೆ!
ನೂರಕ್ಕೂ ಹೆಚ್ಚು ಜನ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು, ಶಿಬಿರದಲ್ಲಿ ತಪಾಸಣೆಗೊಳಗಾದರು. ಪತ್ರಕರ್ತರಾದ ಕೃಷ್ಣ ಲಮಾಣಿ, ಕಿಚಿಡಿ ಕೊಟ್ರೇಶ್, ಪೂರ್ಣಿಮಾ ನಿರ್ವಹಿಸಿದರು.