Site icon Vistara News

Vijayanagara News: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಆರ್. ಸಿದ್ದೇಶ್ ಆಯ್ಕೆ

K.R. Siddesh elected as President of Hosakote Primary Agricultural pattina Cooperative Society

ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಆರ್. ಸಿದ್ದೇಶ್ ಅವಿರೋಧವಾಗಿ (Vijayanagara News) ಆಯ್ಕೆಯಾಗಿದ್ದಾರೆ.

ಹೊಸಕೋಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ. ನಾಗರಾಜ್ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ. ಆರ್. ಸಿದ್ದೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಬಿ. ಮಾನಸ ಘೋಷಣೆ ಮಾಡಿದರು.

ಇದನ್ನೂ ಓದಿ: Infosys Narayanamurty : ಮಗಳು ಅಕ್ಷತಾ ಜತೆ ಶಾಪ್‌ಗೆ ಬಂದು ಐಸ್‌ ಕ್ರೀಂ ಸವಿದ ಇನ್ಫಿ ನಾರಾಯಣ ಮೂರ್ತಿ

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್. ಸಿದ್ದೇಶ್ ಮಾತನಾಡಿ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ, ಮುಖಂಡರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Deepika Padukone: BAFTA ಪ್ರಶಸ್ತಿ ಸಮಾರಂಭ ನಿರೂಪಿಸುವವರ ತಂಡದಲ್ಲಿರುವ ಏಕೈಕ ಭಾರತೀಯ ನಟಿ ಈಕೆ!

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ನಾಗಪ್ಪ, ಎಚ್. ಶರಣಪ್ಪ, ಎಸ್. ಜಾತಪ್ಪ, ಎಚ್. ಕೊಟ್ರೇಶಪ್ಪ, ಜಿ.ಎಂ.ವನಜಾಕ್ಷಿ,ಎಚ್.ಎಸ್. ಗೌರಮ್ಮ, ಆರ್. ಕೊಟ್ರೇಶ್, ಎಸ್.ಎ.ಜ್ಯೋತಿರ್ಲಿಂಗ, ಜಿ. ಸಿದ್ದೇಶ್, ಎಚ್.ರಾಮಪ್ಪ,ಕಾರ್ಯನಿರ್ವಾಹಣಾಧಿಕಾರಿ ಕೆ. ಭೀಮಪ್ಪ, ಸಿಬ್ಬಂದಿ, ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version