Site icon Vistara News

Vijayanagara News: ಕನ್ನಡ ಜ್ಯೋತಿ ರಥಯಾತ್ರೆಗೆ ಕೂಡ್ಲಿಗಿಯಲ್ಲಿ ಸ್ವಾಗತ

Kannada Jyoti RathaYatra gets welcome in Kudligi

ಕೂಡ್ಲಿಗಿ: ‘ಕರ್ನಾಟಕ ಸಂಭ್ರಮ-50’ ರ ಕನ್ನಡ ಜ್ಯೋತಿ ರಥಯಾತ್ರೆಯನ್ನು (Kannada Jyoti Rathayatra) ಕೊಟ್ಟೂರು ತಾಲೂಕಿನಿಂದ ಕೂಡ್ಲಿಗಿ ತಾಲೂಕಿಗೆ ಭಾನುವಾರ ಬೆಳಿಗ್ಗೆ ತಾಲೂಕು ಆಡಳಿತ, ತಾ.ಪಂ. ಹಾಗೂ ಪ.ಪಂ., ಕನ್ನಡಪರ ಸಂಘಟನೆಗಳ ವತಿಯಿಂದ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ರೇಣುಕಾ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಈ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಬಳಿಕ ತಾಲೂಕು ಪಂಚಾಯಿತಿ ಇಒ ವೈ .ರವಿಕುಮಾರ್ ಮಾತನಾಡಿದರು.

ಇದನ್ನೂ ಓದಿ: IDEATHON 23: ಬ್ರ್ಯಾಂಡ್‌ ಬೆಂಗಳೂರಿಗಾಗಿ ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯು ಸಂಚರಿಸಿತು. ನೂರಾರು ವಿದ್ಯಾರ್ಥಿಗಳು ಹಾಗೂ ವಾದ್ಯ ಮೇಳಗಳೊಂದಿಗೆ ಕಲಾವಿದರು ಹೆಜ್ಜೆ ಹಾಕಿ, ಮೆರವಣಿಗೆಯನ್ನು ಮೆರಗುಗೊಳಿಸಿದರು.

ಪಟ್ಟಣದ ಮದಕರಿ ವೃತ್ತದಲ್ಲಿ ನಾಡಿನ ಸಂಸ್ಕೃತಿ ಬಿಂಬಿಸುವ ಗಾಯನಕ್ಕೆ ಕಲಾವಿದರ ನೃತ್ಯವು ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ICC World Cup 2023 : ನೆದರ್ಲ್ಯಾಂಡ್ಸ್​​ ವಿರುದ್ಧದ ಪಂದ್ಯದ ಬೆಸ್ಟ್​ ಫೀಲ್ಡರ್​ ಯಾರು ಗೊತ್ತೇ?

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ. ಶಿವರಾಜ್, ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಸದಸ್ಯರಾದ ಕಾವಲಿ ಶಿವಪ್ಪನಾಯಕ, ಕೆ.ಈಶಪ್ಪ, ಪೂರ್ಯ ನಾಯ್ಕ್, ಪಿ.ಚಂದ್ರು, ಸಚಿನ್ ಕುಮಾರ್, ಕನ್ನಡ ಪರ ಸಂಘಟನೆಯ ಮುಖಂಡರಾದ ಕಾಟೇರ್ ಹಾಲೇಶ್, ರಾಘವೇಂದ್ರ ಸಾಲುಮನಿ, ಪ್ರದೀಪ್ ಕುಮಾರ್, ಸಿ.ರಾಘವೇಂದ್ರ, ಓಬಳೇಶ, ರಿಯಾಜ್ ಪಾಷ ಸೇರಿದಂತೆ ಅನೇಕರು ಇದ್ದರು.

Exit mobile version