ಕೊಟ್ಟೂರು: ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಸಂಭ್ರಮದಿಂದ ಆಚರಿಸಲಾಯಿತು.
ಕರುನಾಡ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷೆ ಕವಿತಾ ಕುಮಾರಸ್ವಾಮಿ, ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ ಯಶಸ್ವಿ ಪರೀಕ್ಷೆ; ನೌಕಾಪಡೆಗೆ ಭೀಮ ಬಲ!
ಕಾರ್ಯಕ್ರಮಕ್ಕೂ ಮುನ್ನ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಆಟೋ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆಯು, ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಿ, ಆನಂತರ ಉಜ್ಜಿನಿ ಸರ್ಕಲ್, ರೇಣುಕಾ ಟಾಕೀಸ್ ರಸ್ತೆ ಮಾರ್ಗವಾಗಿ ಸಂಚರಿಸಿ ಪುನಃ ಆಟೋ ನಿಲ್ದಾಣಕ್ಕೆ ಬಂದು ತಲುಪಿತು.
ಇದನ್ನೂ ಓದಿ: Tumkur News: ಪೊಲೀಸ್ ‘112’ ವಾಹನವನ್ನೇ ಚಲಾಯಿಸಿಕೊಂಡು ಪರಾರಿಯಾದ ಆರೋಪಿ!
ಈ ಸಂದರ್ಭದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶಿವಯ್ಯ, ಬಂಡಿ ಕೊಟ್ರೇಶ್, ದೊಡ್ಡ ವೀರಪ್ಪ, ಬಹುದ್ದೂರ್ ರಮೇಶ್, ಬೇವೂರು ಅಜ್ಜಯ್ಯ, ಜೊಳ್ಳಿ ಪರಶುರಾಮ್, ಕನ್ನಕಟ್ಟಿ ಪರಶುರಾಮ್, ಮಹೇಶ್, ಹಳ್ಳಿ ನಾಗರಾಜ್, ಮುರಳಿಧರ, ಚಿಗಟೇರಿ ಗಣೇಶ್, ಬಣಕಾರ್ ಕೊಟ್ರೇಶ್, ವಿ. ಸಿದ್ದೇಶ್ ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.