Site icon Vistara News

Vijayanagara News: ವಿಜೃಂಭಣೆಯಿಂದ ಕೆಂಗಳ ದುರುಗಮ್ಮ ದೇವಿಯ ಜಾತ್ರಾ ಮಹೋತ್ಸವ

Kengala Durugamma Devi Jatra Mahotsava in Kottur

ಕೊಟ್ಟೂರು: 12 ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಕೆಂಗಳ ದುರುಗಮ್ಮ ದೇವಿಯ (Kengala Durugamma Devi) ಜಾತ್ರಾ ಮಹೋತ್ಸವ (Jatra Mahotsava) ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಮಧ್ಯಾಹ್ನ ಪಟ್ಟಣದ ಊರಮ್ಮನ ಬಯಲು ಪ್ರದೇಶದಿಂದ ಶ್ರೀ ದುರುಗಮ್ಮ ದೇವಿಯ ಮೂರ್ತಿಯ ಮೆರವಣಿಗೆಯು ವಿವಿಧ ವಾದ್ಯಗಳೊಂದಿಗೆ ಭಕ್ತರ ಜಯ ಘೋಷಗಳೊಂದಿಗೆ ಆರಂಭಗೊಂಡಿತು.

ಇದನ್ನೂ ಓದಿ: ಸುವರ್ಣ ಪೊಲೀಸ್‌ ಭವನ ಸೇರಿ ಪೊಲೀಸ್‌ ಇಲಾಖೆಗೆ ಹಲವು ಮಹತ್ವದ ಘೋಷಣೆ ಮಾಡಿದ ಸಿಎಂ

ಪಟ್ಟಣದ ತೊಟ್ಟಿಲಮಠ ಹಿರೇಮಠ, ಪಟ್ಟಣ ಪಂಚಾಯಿತಿ, ಹಳೇ ಕಟ್ಟಡ ರಸ್ತೆಯಲ್ಲಿ ಸಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕೋಟೆ ವೀರಭದ್ರೇಶ್ವರ ದೇವಸ್ಥಾನದ ರಸ್ತೆ, ಉಜ್ಜಿನಿ ಸರ್ಕಲ್ ಮೂಲಕ ಚಿರಿಬಿ ರಸ್ತೆಯ ಮೇಗೆರಿಯಲ್ಲಿನ ದೇವಸ್ಥಾನದತ್ತ ಮೆರವಣಿಗೆಯು ಸಾಗಿತು. ಸಡಗರ ಸಂಭ್ರಮದಿಂದ ಶ್ರದ್ಧಾ ಭಕ್ತಿಯೊಂದಿಗೆ ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ಇದನ್ನೂ ಓದಿ: ಕ್ರಿಕೆಟ್​ ಪ್ರಿಯರೇ ಗಮನಿಸಿ! ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ನಾಳೆ ಪಾರ್ಕಿಂಗ್ ನಿಷೇಧ

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಜಿ.ಪಂ. ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಮುಖಂಡರಾದ ಬೆಣ್ಣಿಹಳ್ಳಿ ಅಂಜಿನಪ್ಪ, ಬಿ.ಎಸ್.ಆರ್. ಮೂಗಪ್ಪ, ರಂಗಪ್ಪ, ಕೋವಿ ನಾಗರಾಜ, ಸುಂಕದಕಲ್ಲು ನಾಗರಾಜ, ವೆಂಕಟೇಶ್, ಪ್ರಕಾಶ್, ರಾಮಣ್ಣ, ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Exit mobile version