Site icon Vistara News

Vijayanagara News: ಕೊಟ್ಟೂರು ಪ.ಪಂ ಪ್ರಸಕ್ತ ಸಾಲಿನ ಬಜೆಟ್‌ ಪೂರ್ವ ಸಿದ್ಧತಾ ಸಭೆ

Kottur pattana Panchayat Budget Preparatory meeting Meeting

ಕೊಟ್ಟೂರು: ಪಟ್ಟಣ ಪಂಚಾಯಿತಿಯ ಶ್ರೀ ಕೊಟ್ಟೂರೇಶ್ವರ ಸಭಾಂಗಣದಲ್ಲಿ ಬುಧವಾರ 2024-25ನೇ ಸಾಲಿನ ಅಯವ್ಯಯ (ಬಜೆಟ್‌) (Budget) ನ ಪೂರ್ವ ಸಿದ್ಧತಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯ ನೇತೃತ್ವ ವಹಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಈ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದ ಆದಾಯ ಬರುವ ನಿರೀಕ್ಷೆ ಇದ್ದು , ಇದಕ್ಕೆ ಅನುಗುಣವಾಗಿ ಪಟ್ಟಣದ ಸಾರ್ವಜನಿಕರ ಹಿತ ರಕ್ಷಣೆ ಮತ್ತು ಪಟ್ಟಣದ ಅಭಿವೃದ್ಧಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಆಡಳಿತಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು.

ಕುಡಿಯುವ ನೀರು, ವಿದ್ಯುತ್‌, ಚರಂಡಿ ಮತ್ತಿತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ, ಇದರ ಜತೆಗೆ ಇತರೆ ಅಭಿವೃದ್ಧಿ ಮತ್ತಿತರ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಹಾಜರಿರುವ ಪ.ಪಂ ಸದಸ್ಯರುಗಳು ಮತ್ತು ಸಾರ್ವಜನಿಕರು ಸಲಹೆ ನೀಡಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: Road Accident: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿದ್ದ ಬಸ್ ಅಪಘಾತ; ಬಳ್ಳಾರಿಯ ವ್ಯಕ್ತಿ ಸಾವು, ಮೂವರಿಗೆ ಗಾಯ

ಸದಸ್ಯ ಜಿ.ಎಂ. ಸಿದ್ದಯ್ಯ ಮಾತನಾಡಿ, ನಿರ್ಮಲ ಶೌಚಾಲಯಗಳನ್ನು ಹೆಚ್ಚಿನ ಜನಸಾಂದ್ರತೆವುಳ್ಳ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕು, ಮಹಿಳಾ ಮತ್ತು ಪುರುಷರ ಶೌಚಾಲಯಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಣ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.

ಡಿ.ಎಸ್.ಎಸ್. ಮುಖಂಡ ಮರಿಸ್ವಾಮಿ ಬಿ. ಮಾತನಾಡಿ, ಪಟ್ಟಣದ ಎಲ್ಲಾ ವಾರ್ಡ್‌ಗಳಿಂದ ಸಂಗ್ರಹವಾಗುವ ಕೊಳಚೆ ಮತ್ತು ತಾಜ್ಯ ನೀರನ್ನು ಹ್ಯಾಳ್ಯಾ ರಸ್ತೆಯ ಮುಖ್ಯ ಕಾಲುವೆಯ ಮೂಲಕ ಹರಿಸುತ್ತಿರುವುದು ಸರಿಯಲ್ಲ. ಇದರ ಬದಲಾಗಿ ಪಟ್ಟಣದ ನಾಲ್ಕೈದು ರಸ್ತೆಗಳ ಚರಂಡಿ ನೀರನ್ನು ಬೇರೆ ಮಾರ್ಗಗಳ ಮೂಲಕ ಹರಿಸಲು ಮುಂದಾಗಬೇಕು, ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಪ.ಪಂ. ಸದಸ್ಯರಾದ ತೋಟದ ರಾಮಣ್ಣ, ಮರಬದ ಕೊಟ್ರೇಶ್‌, ಹೊಸಮನಿ ವಿನಯಕುಮಾರ್, ಶಫಿ, ಸಾವಿತ್ರಮ್ಮ, ಶೈಲಜಾ, ವಿದ್ಯಾಶ್ರೀ, ಟಿ.ಜಗದೀಶ್‌, ಕೆಂಗರಾಜ, ವೀಣಾ ವಿವೇಕಾನಂದ ಹಾಗೂ ಮತ್ತಿತರರು ಕೆಲವು ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: Ballari News: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿ. ಶ್ವೇತಾ ಆಯ್ಕೆ

ಈ ವೇಳೆ ಅರೋಗ್ಯ ನಿರೀಕ್ಷಕಿ ಅನುಷಾ, ಎಂಜಿನೀಯರ್‌ ನಿಹಾರಿಕಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version