Site icon Vistara News

Vijayanagara News: ಚುನಾವಣಾ ವೆಚ್ಚ; ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ

Lok Sabha Election election expense Training in hosapete

ಹೊಸಪೇಟೆ: ಲೋಕಸಭಾ ಚುನಾವಣೆ-2024 ರ (Lok Sabha Election 2024) ಹಿನ್ನೆಲೆ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ವಿವಿಧ ತಂಡದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶನಿವಾರ ತರಬೇತಿ ನೀಡಲಾಯಿತು.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ವ ವೀಕ್ಷಕರಾದ ಸುರೇಂದ್ರ ಪೌಲ್ ಕೆ. ಮತ್ತು ಕೆ. ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ವಿಎಸ್‌ಟಿ, ವಿವಿಟಿ, ಎಫ್‌ಎಸ್‌ಟಿ, ಎಸ್‌ಎಸ್‌ಟಿ, ಅಕೌಂಟಿಂಗ್ ತಂಡ ಹಾಗೂ ಎಂಸಿಎಂಸಿ ಸೇರಿದಂತೆ ವಿವಿಧ ತಂಡಗಳಿಗೆ ಚುನಾವಣಾ ವೆಚ್ಚದ ಕುರಿತು ತರಬೇತಿ ನೀಡಲಾಯಿತು.

ಚುನಾವಣಾ ವೆಚ್ವ ವೀಕ್ಷಕ ಸುರೇಂದ್ರ ಪೌಲ್ ಕೆ. ಮಾತನಾಡಿ, ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚಗಳ ಬಗ್ಗೆ ಹಾಗೂ ಚುನಾವಣಾ ಅವಧಿಯಲ್ಲಿ ಅನುಮಾನಾಸ್ಪದ ವ್ಯವಹಾರಗಳ ಬಗ್ಗೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Job Alert: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ; ವಿವಿಧ ಹುದ್ದೆಗಳಿಗೆ ಏ. 25ರೊಳಗೆ ಅರ್ಜಿ ಸಲ್ಲಿಸಿ

ಮತ್ತೋರ್ವ ಚುನಾವಣಾ ವೆಚ್ವ ವೀಕ್ಷಕ ಕೆ. ಕೃಷ್ಣಮೂರ್ತಿ ಮಾತನಾಡಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಖರ್ಚು ವೆಚ್ಚದ ಬಗ್ಗೆ ಅವರ ಶ್ಯಾಡೋ ರಿಜಿಸ್ಟರ್ ಮತ್ತು ಪೋಲ್ಡರ್ ಆಫ್ ಎವಿಡನ್ಸ್‌ಗಳನ್ನು ಸೂಕ್ತವಾಗಿ ನಿರ್ವಹಿಸಲು ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣಾ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣೆಯ ಬಳ್ಳಾರಿ ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ಹರೀಶ್ ತರಬೇತಿಯಲ್ಲಿ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ನಡೆಸುವ ಸಾರ್ವಜನಿಕ ಸಭೆಗಳು, ರ‍್ಯಾಲಿಗಳು, ನೀಡುವ ಜಾಹೀರಾತುಗಳು, ಬಳಸುವ ಪೋಸ್ಟರ್‌ಗಳು, ಬ್ಯಾನರ್‌ಗಳು, ವಾಹನಗಳು ಸೇರಿದಂತೆ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಯು ಕಾನೂನುಬದ್ಧವಾಗಿ ಮಾತ್ರ ಖರ್ಚು ಮಾಡಲು ಅನುಮತಿಸಲಾಗಿರುತ್ತದೆ. ಸಂಶಯಾಸ್ಪದ ವಹಿವಾಟು ಕಂಡುಬಂದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲು ಆಯಾ ತಂಡದಲ್ಲಿನ ಅಧಿಕಾರಿಗಳು ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ಲೋಕಸಭಾ ಚುನಾವಣೆಯ ಚುನಾವಣಾ ವೆಚ್ಚದ ಬಳ್ಳಾರಿಯ ನೋಡಲ್ ಅಧಿಕಾರಿ ನಾಗರಾಜು ಹಾಗೂ ಲೋಕಸಭಾ ಚುನಾವಣೆಯ ಚುನಾವಣಾ ವೆಚ್ಚದ ವಿಜಯನಗರ ಜಿಲ್ಲಾ ನೋಡಲ್ ಅಧಿಕಾರಿ ಸಿ.ಜಿ. ಶ್ರೀನಿವಾಸ್‌ ಉಪಸ್ಥಿತರಿದ್ದರು.

ಇದನ್ನೂ ಓದಿ: Vijayanagara News: ಗೃಹರಕ್ಷಕ ದಳದ ಶಿಬಿರಾರ್ಥಿಗಳಿಗೆ ಮತದಾನ ಜಾಗೃತಿ

ಕಾರ್ಯನಿರ್ವಹಣೆಯ ಪರಿಶೀಲನೆ

ಚುನಾವಣಾ ವೆಚ್ವ ವೀಕ್ಷಕರಾದ ಸುರೇಂದ್ರ ಪೌಲ್ ಕೆ. ಹಾಗೂ ಕೆ. ಕೃಷ್ಣಮೂರ್ತಿ ಅವರು ತರಬೇತಿ ಬಳಿಕ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ವಿವಿಧ ಸಮಿತಿಗಳ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಿದರು.

Exit mobile version