ಹಗರಿಬೊಮ್ಮನಹಳ್ಳಿ: ಸರ್ಕಾರದ (Government) ಯಾವುದೇ ಸೌಲಭ್ಯಗಳು ಇರುವುದು ಸಾರ್ವಜನಿಕರು ಮತ್ತು ರೈತರಿಗಾಗಿ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಕೆ. ನೇಮರಾಜ್ ನಾಯ್ಕ್ (Vijayanagara News) ತಿಳಿಸಿದರು.
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಜನೆಯ ಫಲಾನುಭವಿಗಳ ಕೃಷಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸುವ ಪೂಜೆಯೊಂದಿಗೆ ಶನಿವಾರ ಚಾಲನೆ ನೀಡಿ, ಬಳಿಕ ಅವರು ಮಾತನಾಡಿ, ಗಂಗಾ ಕಲ್ಯಾಣ ಯೋಜನೆ ರೈತರಿಗೆ ವರದಾನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ; ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರ್ಕಾರ ಆದೇಶ
ಇದಕ್ಕೂ ಮುನ್ನ ಗ್ರಾಮದ ಆಂಜನೇಯ ಸ್ವಾಮಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಫಲಾನುಭವಿ ಬ್ಯಾಟಿ ಕಡ್ಲಪ್ಪನವರ ಕೃಷಿ ಭೂಮಿಯಲ್ಲಿ ಬೋರ್‌ವೆಲ್‌ನಿಂದ ಚಾಲನೆ ನೀಡಲಾಯಿತು.
ಇದನ್ನೂ ಓದಿ: Shamar Joseph : ಐಪಿಎಲ್ನ ಲಕ್ನೊ ತಂಡ ಸೇರಿದ ಗಬ್ಬಾ ಟೆಸ್ಟ್ ಹೀರೊ
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಗ್ರಾ.ಪಂ ಸದಸ್ಯರಾದ ಎಚ್.ದೊಡ್ಡಬಸಪ್ಪ, ಒ.ವಿರುಪಣ್ಣ, ಸಿ.ರಮೇಶ, ಮುಖಂಡರಾದ ಬಿ.ಮಂಜುನಾಥಗೌಡ್ರು, ಕೃಷ್ಣಂರಾಜು, ಟಿ.ಎಂ.ಶರಣಯ್ಯ, ಎಚ್.ಹೇಮಣ್ಣ, ಬಿ.ಅಂಜಿನಪ್ಪ, ಹೋಟಲ್ ಸಿದ್ದರಾಜು, ಕೆ.ರೋಹಿತ್, ಎಚ್.ಕೆ.ವಿರುಪಾಕ್ಷಿ, ಗವಿಸಿದ್ದಯ್ಯ, ಎಸ್.ವಿರುಪಾಕ್ಷಿ, ಕೆ.ರುದ್ರೇಶ್, ಎಂ.ಎಂ.ಶಾಂತವೀರ, ಛಲವಾದಿ ನಾಗರಾಜ್, ಜಾಕೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.