Site icon Vistara News

Vijayanagara News: ಹೊಸಪೇಟೆಯಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ

Makkala sahitya sambhrama Programme inauguration at hosapete

ಹೊಸಪೇಟೆ: ಓದಿಗೆ ಯಾವುದೇ ಪರ್ಯಾಯವಿಲ್ಲ. ನಾವು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಓದು ಅತೀ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು (Vijayanagara News) ತಿಳಿಸಿದರು.

ತಾಲೂಕಿನ ಹಳೆಮಲಪನಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಗೀಳು ಜಾಸ್ತಿ ಆಗುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳ ಸೃಜನಶೀಲತೆಗೆ ಹೆಚ್ಚಿನ ಒತ್ತನ್ನು ಈ ಸಾಹಿತ್ಯ ಸಂಭ್ರಮ ನೀಡಲಿದೆ ಎಂದ ಅವರು, ಕಥೆ ಕಟ್ಟೋಣ, ಕವಿತೆ ಕಟ್ಟೋಣ, ನಾನು ರಿಪೋರ್ಟರ್, ನಾಟಕ ಮಾಡೋಣ ಎಂಬ ನಾಲ್ಕು ಕಾರ್ನರ್ ಗಳನ್ನು ರೂಪಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಬರವಣಿಗೆ ಮಾಡುವರು ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಇನ್ನೆರಡು ದಿನ ಬಿಸಿಲು ರಣ ರಣ; ಜನ ಹೈರಾಣ!

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚೆನ್ನಬಸಪ್ಪ ಮಾತನಾಡಿ, ಈ ಸಾಹಿತ್ಯ ಸಂಭ್ರಮದ ಚಟುವಟಿಕೆಗಳು ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ದಾರಿಯನ್ನು ತೋರಲಿದೆ ಎಂದು ತಿಳಿಸಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಎಚ್.ಸೌಭಾಗ್ಯಲಕ್ಷ್ಮಿ ಮಾತನಾಡಿ, ಮಕ್ಕಳ ಸಾಹಿತ್ಯ ಸಂಭ್ರಮದ ಯೋಜನೆಯ ರೂಪಿಸಲು ಆರು ತಿಂಗಳಿನಿಂದ ಶ್ರಮಪಡಲಾಗಿದೆ. ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಬೇಕಾದಂತಹ ಕೈಪಿಡಿಯನ್ನು ತಯಾರಿಸಿದ್ದಾರೆ. ಮಕ್ಕಳು ಸುಲಭ ರೀತಿಯಲ್ಲಿ ಸಾಹಿತ್ಯ ರಚಿಸುವಂತೆ ಅನೇಕ ಚಟುವಟಿಕೆಗಳನ್ನು ಇದರಲ್ಲಿ ರೂಪಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶ ಶಿಕ್ಷಕರ ಬೋಧನಾ ವಿಧಾನವನ್ನು ತಿಳಿಸುವುದಾಗಿದೆ. ಮಕ್ಕಳ ಅಭಿವ್ಯಕ್ತಿಯ ಕ್ರಮವನ್ನು ಚಟುವಟಿಕೆಗಳ ಮೂಲಕ ಅನಾವರಣಗೊಳಿಸುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾರಾ ಮಂಚಪ್ಪ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಇದನ್ನೂ ಓದಿ: ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?

ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ ಉಮೇಶ್, ಮಲಪನಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಹಂಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಜನಿ, ಎಸ್.ಡಿ ಎಂ.ಸಿ ಅಧ್ಯಕ್ಷ ನಾಗರಾಜ್, ಎಂ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸುಧಾದೇವಿ, ಗುರುಬಸವರಾಜ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ, ಪ್ರೌಢಶಾಲಾ ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ವಿಜಯನಗರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶೇಖರ್ ಗಿರಡ್ಡಿ, ಮಕ್ಕಳ ಸಾಹಿತ್ಯ ಸಂಭ್ರಮದ ನೋಡಲ್ ಅಧಿಕಾರಿ ಕಾವ್ಯಶ್ರೀ, ಮಧ್ಯಾಹ್ನ ಬಿಸಿ ಊಟದ ನಿರ್ದೇಶಕ ಸುಧಾಕರ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಡಾ.ಟಿ.ಎಂ. ಉಷಾರಾಣಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Health Benefits Of Strawberries: ಸ್ಟ್ರಾಬೆರಿ ತಿಂದರೆ ಲಾಭಗಳು ಒಂದೆರಡಲ್ಲ!

ವಿದ್ಯಾವತಿ ಮತ್ತು ಕೆ. ಶಾಂತಲಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾರಿ ಮುಖ್ಯಗುರು ಟಿ.ವಿಶ್ವನಾಥ್ ಸ್ವಾಗತಿಸಿದರು.

Exit mobile version