Site icon Vistara News

Vijayanagara News: ಗುಡೇಕೋಟೆಯಲ್ಲಿ ಒನಕೆ ಓಬವ್ವ ಜಯಂತಿ ಆಚರಿಸುವಂತೆ ಮನವಿ

Vijayanagara News Memorandum for Onake Obavva Jayanti celebration in Gudekote

ಕೂಡ್ಲಿಗಿ: ವೀರವನಿತೆ ಒನಕೆ ಓಬವ್ವನ (Onake Obavva) ತವರೂರಾದ ಗುಡೇಕೋಟೆಯಲ್ಲಿ (Gudekote) ಓಬವ್ವನ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ನೇತೃತ್ವದಲ್ಲಿ ಗುಡೇಕೋಟೆ ಗ್ರಾಮಸ್ಥರು, ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹಾಗೂ ತಹಸೀಲ್ದಾರ್‌ ಎಂ. ರೇಣುಕಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಅವರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ವೀರ ವನಿತೆ ಒನಕೆ ಓಬವ್ವ ಗುಡೇಕೋಟೆಯಲ್ಲಿ ಜನಿಸಿದ್ದರು ಎಂದು ಇತಿಹಾಸಕಾರರು ಖಚಿತಪಡಿಸಿದ್ದಾರೆ. ಅಲ್ಲದೆ ಇಲ್ಲಿ ಪಾಳೆಗಾರರು ಅಳಿದ ಕುರುವುಗಳು ಸಹ ಸಿಕ್ಕಿವೆ ಎಂದು ತಿಳಿಸಿರುವ ಅವರು, ಕಳೆದ ವರ್ಷ ಓಬವ್ವನ ಜಯಂತಿಯನ್ನು ಖಾಸಗಿಯಾಗಿ ಗ್ರಾಮಸ್ಥರಿಂದಲೇ ಆಚರಣೆ ಮಾಡಲಾಗಿತ್ತು. ಅದ್ದರಿಂದ ಈ ಬಾರಿಯಾದರೂ ಓಬವ್ವನ ಜಯಂತಿಯನ್ನು ತಾಲೂಕು ಆಡಳಿತದಿಂದ ಗುಡೇಕೋಟೆ ಗ್ರಾಮದಲ್ಲಿ ಆಚರಣೆ ಮಾಡಬೇಕು ಹಾಗೂ ಸರ್ಕಾರ ಮಟ್ಟದಲ್ಲಿ ಪ್ರತಿ ವರ್ಷ ಗುಡೇಕೋಟೆ ಉತ್ಸವ ನಡೆಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Deepavali 2023: ದೀಪಾವಳಿಯ ಹಿಂದೆ ಎಷ್ಟೊಂದು ಆಸಕ್ತಿದಾಯಕ ಕಥೆಗಳು! ತಪ್ಪದೇ ಓದಿ

ಮನವಿ ಸ್ವೀಕರಿಸಿದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಗುಡೇಕೋಟೆ ಗ್ರಾಮ ವೀರ ವನಿತೆ ಒನಕೆ ಓಬವ್ವನ ತವರೂರು ಎಂಬುದು ನಮ್ಮೆಲರ ಹೆಮ್ಮೆಯಾಗಿದೆ. ಅವರ ಜಯಂತಿಯನ್ನು ಈ ಬಾರಿ ತಾಲೂಕು ಮಟ್ಟದಲ್ಲಿಯೇ ಸರಳವಾಗಿ ಆಚರಣೆ ಮಾಡಲಾಗುವುದು. ಫೆಬ್ರವರಿ ತಿಂಗಳಲ್ಲಿ ಗುಡೇಕೋಟೆಯಲ್ಲಿ ಆರ್ಥಪೂರ್ಣವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಮುಖ್ಯ ಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.‌

ಇದನ್ನೂ ಓದಿ: ಕಿರಿಕಿರಿಯುಂಟು ಮಾಡುವ ಎಸ್ಸೆಮ್ಮೆಸ್, ಧ್ವನಿ ಕರೆಗಳಿಗೆ ಟ್ರಾಯ್ ಬ್ರೇಕ್!

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ರೇಣುಕಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ. ರವಿಕುಮಾರ್‌, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ತಾಲೂಕು ಅಧ್ಯಕ್ಷ ಸಿ. ಮಾರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಶಿವರಾಜ್, ಕರವೇ ಹೋಬಳಿ ಅಧ್ಯಕ್ಷ ಶಿವಕುಮಾರ್, ಪಾಳೆಗಾರರ ವಂಶಸ್ಥ ಶಿವರಾಜ್ ವರ್ಮ, ಪಿ. ಪ್ರಹ್ಲಾದ್, ಪೇಂಟ್ ತಿಪ್ಪೇಸ್ವಾಮಿ, ಆಜೇಯ, ದುರುಗೇಶ್, ಇತರರು ಇದ್ದರು.

Exit mobile version