Site icon Vistara News

Vijayanagara News: ಹಂಪಿ ಕನ್ನಡ ವಿವಿ ಕುಲಪತಿ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ

District Incharge Minister Zameer Ahmed Khan visited and inspected Hampi Kannada University

ಹೊಸಪೇಟೆ: ಹಂಪಿ ಕನ್ನಡ ವಿಶ್ವ‌ವಿದ್ಯಾಲಯಕ್ಕೆ (Hampi Kannada University) ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಪರಿಶೀಲಿಸಿ, ಬಳಿಕ ವಿವಿಯ ಕುಲಪತಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ ಪರಮಶಿವಮೂರ್ತಿ, ವಿಶ್ವವಿದ್ಯಾಲಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಸಿಬ್ಬಂದಿಯ ವೇತನ 7 ತಿಂಗಳಿನಿಂದ 1.32 ಕೋಟಿ ರೂ ಬಾಕಿ ಇದೆ. ಗೆಸ್ಟ್ ಫ್ಯಾಕಲ್ಟಿಗೆ ನೀಡಬೇಕಾದ 1.48 ಕೋಟಿ ರೂ ಮಾರ್ಚ್‌ನಿಂದ ಬಾಕಿ ಇದೆ. ಹೊರಗುತ್ತಿಗೆ ಸಿಬ್ಬಂದಿ ವೇತನ 1.48 ಕೋಟಿ ರೂ ಬಾಕಿ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: Republic Day : ಜ. 26ರ ಗಣರಾಜ್ಯೋತ್ಸವಕ್ಕೆ ಬಿಗಿ ಭದ್ರತೆ; ಹೋಟೆಲ್‌, ಲಾಡ್ಜ್‌ಗಳ ಮೇಲೂ ನಿಗಾ

ವಿಶ್ವವಿದ್ಯಾಲಯಕ್ಕೆ 10 ಕೋಟಿ ಅನುದಾನ ಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದೇವೆ ಎಂದ ಅವರು, ಈ ಹಿಂದೆ ಕೆಕೆಆರ್‌ಡಿಬಿಯಿಂದ ವಿಶ್ವವಿದ್ಯಾಲಯಕ್ಕೆ ನಿಗದಿಪಡಿಸಿದ 20 ಕೋಟಿ ರೂ.ಗಳಲ್ಲಿ 10 ಕೋಟಿ ಅನುದಾನವನ್ನು ವಿದ್ಯಾರ್ಥಿಗಳ ಒತ್ತಾಯದಂತೆ ಮುಖ್ಯಮಂತ್ರಿಗಳ ವಿವೇಚನೆಯಡಿ ಕಟ್ಟಡದ ಬದಲಾಗಿ ಫೆಲೋಶಿಪ್, ಸ್ಕಾಲರ್‌ಶಿಪ್‌ಗೆ ಬಳಸಲಾಗಿದೆ. ಇದರಿಂದಾಗಿ ಕಟ್ಟಡಕ್ಕೆ ಅನುದಾನದ ಅವಶ್ಯಕತೆ ಇದೆ ಎಂದು ಕುಲಪತಿಗಳು ತಿಳಿಸಿದರು.

ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯಲು ಪ್ರತಿ ತಿಂಗಳು 40 ಲಕ್ಷದಂತೆ ವರ್ಷಕ್ಕೆ 9 ಕೋಟಿ ರೂ. ಬೇಕಾಗುತ್ತದೆ, 30 ವರ್ಷದ ಹಳೆಯ ನೀರಿನ ಲೈನ್ ದುರಸ್ತಿ, ನೀರಿನ ಟ್ಯಾಂಕರ್ ನಿರ್ಮಾಣ, ಪ್ರಸಾರಂಗ ಕಟ್ಟಡದ ದುರಸ್ತಿ ಸೇರಿದಂತೆ ವಿವಿಯ ವಿವಿಧ ಕಾಮಗಾರಿಗಳಿಗೆ ಅಂದಾಜ 20 ಕೋಟಿ ರೂ ಅವಶ್ಯಕತೆ ಇದೆ ಎಂದು ಕುಲಪತಿಗಳು ಸಚಿವರ ಮುಂದೆ ಬೇಡಿಕೆ ಇಟ್ಟರು.

ತಿಂಗಳೊಳಗೆ ಸರಿಪಡಿಸುವೆ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಮುಖ್ಯಮಂತ್ರಿಗಳ ಜತೆಗೆ ಮತ್ತು ಸಂಬಂಧಿಸಿದ ಶಾಸಕರ ಜತೆಗೆ ಚರ್ಚಿಸಿ ಕನ್ನಡ ವಿಶ್ವವಿದ್ಯಾಲಯಕ್ಕೆ ತುರ್ತಾಗಿ ಬೇಕಾದ ಅನುದಾನ ಬಿಡುಗಡೆ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Money plus : ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲು ಪ್ರಾಕ್ಟೀಸ್‌ ಅಗತ್ಯ

ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಜಿಪಂ ಸಿಇಒ ಸದಾಶಿವ ಪ್ರಭು ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯಾತಗಲ್ ಹಾಗೂ ಇತರರು ಇದ್ದರು.

Exit mobile version