Site icon Vistara News

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

Chakravarthi sulibele spoke in Namo Bharat programme at Kudligi

ಕೂಡ್ಲಿಗಿ: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Vijayanagara News) ಹೇಳಿದರು.

ಪಟ್ಟಣದ ತರುಳಬಾಳು ಶಾಲೆಯ ಆವರಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಬುಧವಾರ ಏರ್ಪಡಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Water supply : ಮುಕ್ಕಾಲು ಬೆಂಗಳೂರಲ್ಲಿ ಕುಡಿಯುವ ನೀರು ಸ್ಥಗಿತ; ಯಾವಾಗ? ಎಲ್ಲೆಲ್ಲಿ ವ್ಯತ್ಯಯ

ಕಳೆದ 60 ವರ್ಷಗಳಿಂದ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಅನ್ಯಧರ್ಮೀಯರಿಂದ ಅಕ್ರಮಣಗಳು ನಡೆಯುತ್ತಲೇ ಇದೆ. ಸಹಿಷ್ಣು ಹಿಂದೂಗಳು ಈ ದಬ್ಬಾಳಿಕೆಯನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ನಮ್ಮ ತಾಳ್ಮೆಯನ್ನು ಯಾರು ಕೂಡ ದೌರ್ಬಲ್ಯ ಎಂದು ಭಾವಿಸಿಕೊಳ್ಳಬಾರದು. ನಮ್ಮ ದೇಶದ ರಾಷ್ಟ್ರೀಯತೆಗಾಗಿ ಹಿಂದೂಗಳು ಒಂದಾಗುವ ಅನಿವಾರ್ಯತೆ ಬಂದಾಗಿದೆ ಎಂದ ಅವರು, ಭರತ ಭೂಮಿಯಲ್ಲಿ ರಾಮನ ಮಂದಿರ ನಿರ್ಮಾಣ ಮಾಡಲಿಕ್ಕೆ ಪ್ರಧಾನಿ ಮೋದಿಯೇ ಬರಬೇಕಾಯಿತು ಎಂದರು.

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಗದ್ದುಗೆಗೆ ಏರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Byju Raveendran: ಬೈಜು ರವೀಂದ್ರನ್‌ಗೆ ಲುಕ್‌ಔಟ್‌ ನೋಟೀಸ್;‌ ಬೈಜು ಕಚೇರಿಯ ಟಿವಿ ಕಿತ್ತೊಯ್ದ ಪೋಷಕರು!

ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಜಿಪಂ ಅಧ್ಯಕ್ಷೆ ಪಿ.ದೀನಾ ಮಂಜುನಾಥ, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ, ಕಾರ್ಯದರ್ಶಿ ಮಂಜುನಾಥ ನಾಯಕ, ಸೂರ್ಯಪಾಪಣ್ಣ, ಬಿ.ಎಸ್.ಆನಂದ ಬಾಬು, ಅಜೇಯ್ ನಿರ್ಕಲ್, ಭರತ್ ಜೂಗಲ್, ಗುಳಿಗೆ ವೀರೇಂದ್ರ, ನಮೋ ಬ್ರಿಗೇಡ್‌ನ ಕೆ.ಎಚ್.ಎಂ.ಸಚಿನ್ ಕುಮಾರ್, ಮಣಿಕಂಠ, ವಿನಯ್, ದಯಾನಂದ ಸಜ್ಜನ್, ಶ್ಯಾವಿ ಕಿಶೋರ, ಕೃಷ್ಣ, ವಿವೇಕ, ಗಂಗಾಧರ, ಸಪ್ತಗಿರಿ ಸೇರಿದಂತೆ ನೂರಾರು ಕಾರ್ಯರ್ತರು, ಇತರರು ಪಾಲ್ಗೊಂಡಿದ್ದರು.

Exit mobile version