ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಪದವಿ ಕಾಲೇಜಿನಲ್ಲಿ ಗಣಿತಶಾಸ್ತ್ರದ ವಿಭಾಗದಿಂದ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನ (National Mathematics Day) ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ರವಿಕುಮಾರ್ ಮಾತನಾಡಿ, ಗಣಿತಶಾಸ್ತ್ರಕ್ಕೆ ಶ್ರೀನಿವಾಸ್ ರಾಮಾನುಜನ್ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಸಿದರು.
ಇದನ್ನೂ ಓದಿ: CET Exam: ಏ. 20, 21ರಂದು ಸಿಇಟಿ ಪರೀಕ್ಷೆ; ಜ. 10ರಿಂದ ಅರ್ಜಿ ಸಲ್ಲಿಕೆ ಆರಂಭ
ಗಣಿತವು ಜನಸಾಮಾನ್ಯರಲ್ಲಿ ಹೇಗೆ ಉಪಯೋಗವಾಗುತ್ತದೆ ಹಾಗೂ ಅದರ ಪ್ರಾಮುಖ್ಯತೆಯನ್ನು ಮತ್ತು ಗಣಿತ ಇಲ್ಲದೆ ಯಾವುದೇ ವ್ಯವಹಾರಿಕ ಜೀವನ ನಡೆಯುವುದಿಲ್ಲ ಹಾಗಾಗಿ ಗಣಿತವು ಮಾನವನ ಜೀವನಕ್ಕೆ ಪ್ರಮುಖವಾಗಿದೆ ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕ ಸಿ. ಬಸವರಾಜ್ ಮಾತನಾಡಿ, ಗಣಿತವು ಎಲ್ಲಾ ವಿಜ್ಞಾನ ವಿಷಯಗಳಿಗೆ ಅಡಿಪಾಯವಾಗಿದೆ ಹಾಗೂ ಕಂಪ್ಯೂಟರ್ ಯುಗಕ್ಕೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Government Employee: 2024ನೇ ಸಾಲಿನ ʻಗಳಿಕೆ ರಜೆʼ ನಗದೀಕರಣಕ್ಕೆ ಸರ್ಕಾರದ ಷರತ್ತುಬದ್ಧ ಗ್ರೀನ್ ಸಿಗ್ನಲ್!
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮಠ, ಭೌತಶಾಸ್ತ್ರದ ಮುಖ್ಯಸ್ಥ ಪ್ರೊ. ಕೃಷ್ಣಪ್ಪ, ಗಣಿತಶಾಸ್ತ್ರದ ಮುಖ್ಯಸ್ಥೆ ಪೂಜಾ, ರೂಪ ಹಾಗೂ ಡಾ. ಸಿದ್ದನಗೌಡ, ಡಾ. ಚೇತನ್, ಕಾಲೇಜು ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.