ಹೊಸಪೇಟೆ: ರಾಮನಗರ ವಕೀಲರ ವಿರುದ್ಧ ಪೊಲೀಸರು ದಾಖಲಿಸಿದ ಸುಳ್ಳು ಕೇಸ್ ಹಿಂಪಡೆಯಲು ಮತ್ತು ಪಿ.ಎಸ್.ಐ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ, ಇಲ್ಲಿಯ ವಕೀಲರ ಸಂಘದಿಂದ ಗುರುವಾರ ಪ್ರತಿಭಟನೆ ಮಾಡಿ, (Vijayanagara News) ಕಲಾಪದಿಂದ ವಕೀಲರು ದೂರ ಉಳಿದರು.
ನ್ಯಾಯಾಲಯದ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಪುನೀತ್ ರಾಜಕುಮಾರ್ ವೃತ್ತದಲ್ಲಿ ಸೇರಿ ರಾಮನಗರ ಪೊಲೀಸರ ವಿರುದ್ಧ ಘೋಷಣೆ ಕೂಗಲಾಯಿತು ಹಾಗೂ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಲು ಒತ್ತಾಯಿಸಲಾಯಿತು.
ಇದನ್ನೂ ಓದಿ: Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ
ಪ್ರತಿಭಟನೆಯಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಪ್ರಹ್ಲಾದ್ ಮಾತನಾಡಿದರು.
ಬಳಿಕ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶ್ರುತಿ ಎಂ.ಎಂ ಅವರಿಗೆ ಸಲ್ಲಿಸಲಾಯಿತು.
ಇದನ್ನೂ ಓದಿ: Nitin Gadkari : ಪೆಟ್ರೋಲ್ ಬೆಲೆ ಶೀಘ್ರವೇ 50 ರೂ.ಗೆ ಇಳಿಯಲಿದೆ ಎಂದ ನಿತಿನ್ ಗಡ್ಕರಿ
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ.ಶ್ರೀನಿವಾಸಮೂರ್ತಿ, ಎಚ್.ಎಂ.ಮಂಜುನಾಥಸ್ವಾಮಿ, ವಿ.ರವಿಕುಮಾರ, ಎ.ಮರಿಯಪ್ಪ ಹಾಗೂ ಹಿರಿಯ ವಕೀಲರಾದ ಎಸ್.ವಿ.ಜವಳಿ, ಡಿ.ರವಿರಾಜ್. ಜಿ.ವೀರಭದ್ರಪ್ಪ, ಜೆ.ಪ್ರಹ್ಲಾದ್ ಶೆಟ್ಟಿ, ಎ.ಕರುಣಾನಿಧಿ, ಬಳ್ಳಾರಿಯ ಜಿ.ಬಸವರಾಜ್, ಐ.ಪರಶುರಾಮ, ಬಿ.ಸಿ.ಮಹಾಂತೇಶ, ನೋಟರಿಗಳಾದ ಚಂದ್ರಶೇಖರ ವಿ.ಯಲಗೊಡು, ತಾರಿಹಳ್ಳಿ ಹನುಮಂತಪ್ಪ ಸೇರಿದಂತೆ ವಕೀಲರು ಪಾಲ್ಗೊಂಡಿದ್ದರು.