Site icon Vistara News

Vijayanagara News: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

Protest by Farmers Union demanding fulfillment of various demands in hagaribommanahalli

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಮಿತಿ ವತಿಯಿಂದ ಬುಧವಾರ ಜೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಯ ಈಶ್ವರ ದೇಗುಲದಿಂದ ಆರಂಭವಾದ ಪ್ರತಿಭಟನೆಯು ರಸ್ತೆಯುದ್ದಕ್ಕೂ ಸರ್ಕಾರ ಹಾಗೂ ವಿದ್ಯುತ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: Road Accident: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿದ್ದ ಬಸ್ ಅಪಘಾತ; ಬಳ್ಳಾರಿಯ ವ್ಯಕ್ತಿ ಸಾವು, ಮೂವರಿಗೆ ಗಾಯ

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉತ್ತರ ಕರ್ನಾಟಕ ಕಾರ್ಯದರ್ಶಿ ಬಿ. ಗೋಣೆಬಸಪ್ಪ ಮಾತನಾಡಿ, ತೆಲುಗೋಳಿ ಮತ್ತು ಜಿ.ಕೋಡಿಹಳ್ಳಿ ಗ್ರಾಮಗಳಲ್ಲಿ ಸ್ಥಾಪನೆಯಾಗಬೇಕಾದ 66/11 ಕೆ.ವಿ. ವಿದ್ಯುತ್ ಉಪಕೇಂದ್ರ ಕಾಮಗಾರಿ ಕೂಡಲೆ ಆರಂಭಿಸಬೇಕು. ಈ ಹಿಂದೇ ಮಂಜೂರಾದ ಕಾಮಗಾರಿಗಳಿಗೆ ಪರಿವರ್ತಕಗಳನ್ನು ಒದಗಿಸಿಕೊಡಬೇಕು, ನೆನೆಗುದಿಗೆ ಬಿದ್ದಿರುವ ಅಕ್ರಮ ಸಕ್ರಮ ಯೋಜನೆಗೆ ಪರಿವರ್ತಕಗಳನ್ನು ನೀಡಬೇಕು, ಯೋಜನೆ ಕೂಡಲೆ ಕೈಗೆತ್ತಿಕೊಳ್ಳಬೇಕು. ರೈತರಿಗೆ ನೀಡುತ್ತಿರುವ ಕಿರುಕುಳಗಳು ತಪ್ಪಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜೆಸ್ಕಾಂನ ಬಳ್ಳಾರಿಯ ಮುಖ್ಯ ಅಧೀಕ್ಷಕ ಚೌವ್ಹಾಣ್, ಹೊಸಪೇಟೆಯ ಕೆಪಿಟಿಸಿಎಲ್‌ನ ಇಇ ಶ್ರೀನಿವಾಸ, ಇಲ್ಲಿಯ ಪ್ರಭಾರಿ ಇಇ ತೇಜಾನಾಯ್ಕ್, ಬಳ್ಳಾರಿ ಸಿಇ ಚೌವ್ಹಾಣ್ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಶೀಘ್ರದಲ್ಲೇ ಪ್ರಮಾಣಿಕ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: Ballari News: ಬಳ್ಳಾರಿಯಲ್ಲಿ ಜ.13ರಂದು ಕರ್ಪೂರಿ‌ ಠಾಕೂರ್ ಜನ್ಮ ಶತಮಾನೋತ್ಸವ, ಪುಸ್ತಕ ಲೋಕಾರ್ಪಣೆ

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ, ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ರವಿ ತಂಬ್ರಹಳ್ಳಿ, ಮಾಬುಸಾಬ್, ಕರವೇ ಅಧ್ಯಕ್ಷ ಎನ್.ಎಂ.ಗೌಸ್, ಬಾಣದ ಶಿವಪ್ಪ, ಏಣಿಗಿ ಕರಿಯಪ್ಪ, ಒಪ್ಪತೇಶ, ಎಚ್.ಮಹೇಶ್‌, ಪಂಪಾಪತಿ, ಎಂ.ಬಸಪ್ಪ, ಬಿ.ಮಲ್ಲಿಕಾರ್ಜುನ, ಎಚ್.ರುದ್ರಗೌಡ, ಎಚ್.ಶೇಖರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version