Site icon Vistara News

Vijayanagara News: ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂಗೆ ನುಡಿನಮನ

retired IAS officer K Shivaram nudi namana programme

ಹರಪನಹಳ್ಳಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೆ. ಶಿವರಾಂ ಅಭಿಮಾನಿ ಬಳಗದಿಂದ ಈಚೆಗೆ ನಿಧನರಾದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಅವರಿಗೆ ನುಡಿನಮನ ಕಾರ್ಯಕ್ರಮ (Vijayanagara News) ನಡೆಯಿತು.

ಕಾರ್ಯಕ್ರಮದಲ್ಲಿ ನಿಲಗುಂದದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಸಾನಿಧ್ಯ ವಹಿಸಿ ಮಾತನಾಡಿ, ಐಎಎಸ್‌ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರಿಗೆ ಹಮ್ಮು ಬಿಮ್ಮುಇರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಿದ್ದರು. ಸಮಸ್ಯೆ, ದೂರುಗಳು ಬಂದಲ್ಲಿ ಸ್ಥಳಕ್ಕೆ ಹೋಗಿ ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Class 5 8 9 Exam Result: 5, 8 ಹಾಗೂ 9ನೇ ತರಗತಿ ಬೋರ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟ; ಶಾಲೆಯಲ್ಲೇ ಸಿಗಲಿದೆ ರಿಪೋರ್ಟ್‌ ಕಾರ್ಡ್‌

ಜೀವನದಲ್ಲಿ ಶ್ರೇಷ್ಠವಾದ ಶಿಸ್ತು, ಸಂಸ್ಕಾರಯುತ ಬದುಕನ್ನು ನಡೆಸಿ, ಭಾರತದ ಇತಿಹಾಸದಲ್ಲೇ ಕನ್ನಡದಲ್ಲಿ ಐಎಎಸ್ ಪದವಿ ಪಾಸು ಮಾಡಿ ಉತ್ತಮ ಅಧಿಕಾರಿಯಾಗಿ, ಚಲನಚಿತ್ರ ನಟರಾಗಿ ಸಮಾಜ ಸಂಘಟನೆ ಮಾಡಿ, ಉಸಿರು ನಿಂತರೂ ಉತ್ತಮ ಹೆಸರು ಮಾಡಿರುವ ಕೆ.ಶಿವರಾಂ ಅವರ ಆದರ್ಶಗಳನ್ನು ತಾವೆಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದು ತಿಳಿಸಿದರು.

ವಿಜಯನಗರ ಜಿಲ್ಲಾ ಚಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಣ್ಣದ ಮನೆ ಸೋಮಶೇಖರ್, ಶ್ರೀ ಶರಣ ಬಸವ ಬುದ್ದ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿದರು.

ಅಂಬೇಡ್ಕರ್ ಸಮಾಜದ ತಾಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ ಉಪನ್ಯಾಸಕ ಅಜ್ಜಯ್ಯ. ಶಿಕ್ಷಕ ಅರ್ಜುನ ಪರಸಪ್ಪ. ಮುಖ್ಯ ಶಿಕ್ಷಕ ಸಹದೇವ, ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸಣ್ಣ ಅಜ್ಜಯ್ಯ, ಹಗರಿಬೊಮ್ಮನಹಳ್ಳಿ ಛಲವಾದಿ ಮಹಾಸಭಾದ ಅಧ್ಯಕ್ಷ ಗಾಳಿ ಬಸವರಾಜ ಮಾತನಾಡಿದರು.

ಇದನ್ನೂ ಓದಿ: IPL 2024: ಗುಜರಾತ್‌ 54/0, 130ಕ್ಕೆ ಆಲೌಟ್;‌ ಕನ್ನಡಿಗ ರಾಹುಲ್‌ ಕ್ಯಾಪ್ಟನ್ಸಿಗೆ ಉಘೇ ಎಂದ ಜನ!

ಈ ಸಂದರ್ಭದಲ್ಲಿ ನಿಸರ್ಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಲ್ಯಾಣದವರ್ .ಶಿಕ್ಷಕ ಬಸವರಾಜ. ಶ್ರೀ ಶರಣ ಬಸವ ಬುದ್ದ ಭೀಮಜೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೊಟ್ರಮ್ಮ, ಮುಖಂಡರಾದ ಮುತ್ತಿಗಿ ಮಲ್ಲಿಕಾರ್ಜುನ, ಮತ್ತಿಹಳ್ಳಿ ಕೆಂಚಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಶಕುಂತಲಮ್ಮ, ನಿಟ್ಟೂರು ನಾಗರಾಜ, ಮರಿಯಮ್ಮನಹಳ್ಳಿ ಮಂಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version