Site icon Vistara News

Vijayanagara News: ಸಂತ ಸೇವಾಲಾಲ್ ಮಾಲಾಧಾರಿಗಳ ಪಾದಯಾತ್ರೆ

Saint Sevalal Maladharis padayatra in huvina hadagali

ಹೂವಿನಹಡಗಲಿ: ಬಂಜಾರ ಸಮುದಾಯದ ಸಂತ ಸೇವಾಲಾಲ್‌ ಜಯಂತಿ (Saint Sevalal jayanti) ಅಂಗವಾಗಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದಿಂದ ಸೇವಾಲಾಲ್ ಮಾಲಾಧಾರಿಗಳು ಸಂತ ಸೇವಾಲಾಲ್‌ರ ಜನ್ಮಸ್ಥಳವಾದ ಸೂರಗೊಂಡನಕೊಪ್ಪ (ಭಾಯಾಗಡ್) ಗೆ ಭಾನುವಾರ ಪಾದಯಾತ್ರೆ (Vijayanagara News) ಆರಂಭಿಸಿದರು.

ಸತತ 19ನೇ ವರ್ಷದ ಮಾಲೆ ಧರಿಸಿ ಪಾದಯಾತ್ರೆ ಹೊರಟ ತಾಂಡಾದ ಭಕ್ತ ಸಮೂಹಕ್ಕೆ ಗ್ರಾಮಸ್ಥರು ಭಕ್ತಿಭಾವದಿಂದ ಬೀಳ್ಕೊಟ್ಟರು. ಗ್ರಾಮದ 60ಕ್ಕೂ ಹೆಚ್ಚು ಭಕ್ತರು ಶ್ರದ್ದಾಭಕ್ತಿಯಿಂದ ಸಂತ ಸೇವಾಲಾಲ್‌ರ ಮಾಲೆ ಧರಿಸಿದ್ದು, ಪಾದಯಾತ್ರೆಯಲ್ಲಿ ಮಾಲಾಧಾರಿಗಳು ಸೇವಾಲಾಲರ ನಾಮಸ್ಮರಣೆ, ಭಜನೆಯೊಂದಿಗೆ ಹೆಜ್ಜೆ ಹಾಕಿದರು. ಫೆ. 15ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡಕೊಪ್ಪದಲ್ಲಿ 285ನೇ ಸೇವಾಲಾಲ್‌ರ ಜಯಂತಿ ಜರುಗಲಿದ್ದು. ಪಾದಯಾತ್ರೆಯಲ್ಲಿ ತೆರಳಿರುವ ಮಾಲಾಧಾರಿಗಳು ಅಂದು ಮಾಲೆಯನ್ನು ವಿಸರ್ಜಿಸಿ ಸಂತರ ದರ್ಶನಾಶೀರ್ವಾದ ಪಡೆದು ಊರಿಗೆ ಮರಳಲಿದ್ದಾರೆ.

ಇದನ್ನೂ ಓದಿ:Rozgar Mela: ರೋಜಗಾರ್ ಮೇಳದಡಿ 7 ಲಕ್ಷ ಯುವಕರಿಗೆ ಉದ್ಯೋಗ; ಪ್ರಲ್ಹಾದ್‌ ಜೋಶಿ

ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಂತ ಸೇವಾಲಾಲರ ಮಾಲೆಯನ್ನು ತಾಂಡಾದ ಸೇವಾಲಾಲ್ ದೇವಸ್ಥಾನದಲ್ಲಿ ಧರಿಸಿ ಪ್ರತಿದಿನವೂ ಸೇವಾಲಾಲರ ಭಜನೆ ಹಾಡುತ್ತ ಸೇವಾಲಾಲರ ಸೇವೆಯಲ್ಲಿ ತೊಡಗಿಕೊಂಡಿದ್ದರು. ಸೇವಾಲಾಲರ ಜಯಂತಿಯ ನಿಮಿತ್ತ ಮುಂಚಿತವಾಗಿ ಮಾಲೆ ಧರಿಸಿ ಸೇವಾಲಾಲರ ಸೇವೆ ಮಾಡುವ ಭಕ್ತಾಧಿಗಳು, ಸತತ 19ನೇ ವರ್ಷದ ಮಾಲಾಧಾರಣೆ ಮಾಡಿದ್ದು, ಸತತ 5 ದಿನಗಳ ಕಾಲ ಪಾದಯಾತ್ರೆ ನಡೆಸಿ, ರಾಣೇಬೆನ್ನೂರು, ಹಲಗೇರಿ, ಹೊನ್ನಾಳಿ, ಸವಳಂಗ ಮಾರ್ಗವಾಗಿ ಭಾಯಗಡ್ ತಲುಪಲಿದ್ದಾರೆ.‌

ಇದನ್ನೂ ಓದಿ: Aditya Narayan: ಕಾರ್ಯಕ್ರಮ ವೇಳೆ ಅಭಿಮಾನಿಯನ್ನು ಹೊಡೆದು ಮೊಬೈಲ್​ ಕಸಿದು ಎಸೆದ ಖ್ಯಾತ ಗಾಯಕ!

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಪ್ಪ ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಪರಶುರಾಮ ಬಣಕಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಆನಂದ್ ನಾಯ್ಕ, ಗ್ರಾಮದ ಮುಖಂಡರಾದ ದೇವರಾಜ ರಾಠೋಡ್, ಕೃಷ್ಣಾನಾಯ್ಕ, ಥಾವರ್ಯನಾಯ್ಕ ಬಣಕಾರ, ಜೈಲಿಂಗಪ್ಪ, ಸೇವಾಲಾಲ್ ದೇವಸ್ಥಾನದ ಪೂಜಾರಿ ಬೋದ್ಯನಾಯ್ಕ ರಾಠೋಡ್, ಮಾಲಾಧಾರಿಗಳಾದ ಗಣೇಶ್, ಗೌಡ್ರ ವೆಂಕಟೇಶ್ ನಾಯ್ಕ, ಶಂಕರನಾಯ್ಕ, ನಿಂಗಾನಾಯ್ಕ ರಾಠೋಡ್, ರವಿನಾಯ್ಕ ರಾಠೋಡ್, ದೇವರಾಜ ಕಟ್ಟಿ ಸೇರಿ ಇತರರಿದ್ದರು.

Exit mobile version