ಹೊಸಪೇಟೆ: ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಮತ್ತು ದಿನಾಂಕವನ್ನು ಮುಂದೂಡಬೇಕು ಎಂದು ಆಗ್ರಹಿಸಿ, ಎಸ್‌ಎಫ್‌ಐ (SFI) ಸಂಘಟನೆಯ ತಾಲೂಕು ಸಮಿತಿಯ ನೇತೃತ್ವದಲ್ಲಿ ನಗರದ ಶ್ರೀ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶನಿವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕಾಲೇಜಿನ ಪ್ರಾಂಶುಪಾಲರ ಮೂಲಕ ವಿ.ಎಸ್.ಕೆ. ವಿವಿಯ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿ (Vijayanagara News) ಒತ್ತಾಯಿಸಿದರು.
ಇದನ್ನೂ ಓದಿ: Sachin Tenulkar : ಒಡಿಐನಲ್ಲಿ ಸಚಿನ್ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ದೊಡ್ಡಬಸವರಾಜ್, ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ವಿರಳ ಇದೆ. ಈ ಭಾಗದ ಜನರ ಆರ್ಥಿಕವಾಗಿ ತುಂಬಾ ಬಡವರು ಹಾಗೂ ಕಡುಬಡವರು ಇರುತ್ತಾರೆ. ಬಡತನದಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರು, ಮಂಗಳೂರಿನಂತಹ ನಗರಕ್ಕೆ ದುಡಿಯಲು ಹೋದ ಉದಾಹರಣೆ ಸಾಕಷ್ಟು ಇವೆ ಎಂದ ಅವರು, ಕಳೆದ ಎರಡು ವರ್ಷದ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 150 ರೂಪಾಯಿ ಮತ್ತು 250 ರೂಪಾಯಿ ಮಾತ್ರ ಇದ್ದ ಪರೀಕ್ಷಾ ಶುಲ್ಕವು ಎರಡು ವರ್ಷದಲ್ಲಿ ದಿಢೀರನೆ 1,200 ರೂಪಾಯಿ ಆಗಲು ಹೇಗೆ ಸಾಧ್ಯ? ಪರೀಕ್ಷೆ ಶುಲ್ಕ ಹಣ ಹೆಚ್ಚಳ ಮಾಡಿರುವುದನ್ನು ವಿಎಸ್‌ಕೆ ವಿವಿಯು ಕೂಡಲೇ ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ಎಷ್ಟು ಶುಲ್ಕ ಇತ್ತು ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Major Accident: ಭೀಕರ ಅಪಘಾತ; ಟ್ರ್ಯಾಕ್ಟರ್-ಟ್ರಾಲಿ ಕೊಳಕ್ಕೆ ಬಿದ್ದು 15 ಮಂದಿ ಸಾವು
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಸಂಘಟನೆಯ ತಾಲೂಕು ಪದಾಧಿಕಾರಿ ಲೋಕೇಶ್, ಸದಸ್ಯರಾದ ಅರ್ಜುನ್, ನವೀನ್, ಲಕ್ಷ್ಮೀ, ಗಂಗಮ್ಮ, ಕವಿತ, ರಾಜೀವ್, ಉದಯ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.