ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಶಕ್ತಿ ದೇವತೆ ಶ್ರೀ ದಂಡಿನ ದುರುಗಮ್ಮ ದೇವಿಯ (Shri Dandina Durugamma Devi) ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಕಾರ್ತಿಕೋತ್ಸವವು ವಿಜೃಂಭಣೆಯಿಂದ ಜರುಗಿತು.
ಶ್ರೀ ದಂಡಿನ ದುರುಗಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯ ಭಕ್ತರು ಶ್ರದ್ಧಾ ಭಕ್ತಿಯಿಂದ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಇದನ್ನೂ ಓದಿ: Shakthi Scheme : ಖಾಸಗಿ ಬಸ್‌ಗೂ ವಿಸ್ತರಣೆ ಆಗುತ್ತಾ ಶಕ್ತಿ ಯೋಜನೆ? ಹೈಕೋರ್ಟ್ ಹೇಳಿದ್ದೇನು?
ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಗ್ರಾಮದ ಆರಾಧ್ಯ ದೇವತೆ ದಂಡಿನ ದುರುಗಮ್ಮ ದೇವಿಯ ಜಾತ್ರೆಯ ಅಂಗವಾಗಿ ರೈತರು ತಮ್ಮ ಎತ್ತುಗಳನ್ನು ಮೈ ತೊಳೆದು ಅವುಗಳಿಗೆ ವಿವಿಧ ರೀತಿಯ ಹೂಗಳು, ಬಲೂನು, ಜೂಲುಗಳಿಂದ ಅಲಂಕರಿಸಲಾಗಿತ್ತು.
ಇದನ್ನೂ ಓದಿ: Viral News: ಒಂದೇ ಕೊಟ್ಟಿಗೆಯಲ್ಲಿ ಸಿಕ್ಕಿ ಹಾಕಿಕೊಂಡ ಚಿರತೆ-ಎಮ್ಮೆ; ಮುಂದೆ ನಡೆದಿದ್ದೇ ರೋಚಕ!
ಸಿಂಗಾರಗೊಳಿಸಲಾಗಿದ್ದ ಎತ್ತುಗಳನ್ನು ರೈತ ಮಹಿಳೆಯರು ಆರತಿ ಎತ್ತಿ, ಜಾನಪದ ಹಾಡುಗಳನ್ನು ಹಾಡುತ್ತಾ ಗ್ರಾಮ ದೇವತೆ ದಂಡಿನ ದುರುಗಮ್ಮ ದೇವಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರೆವಣಿಗೆ ನಡೆಸಲಾಯಿತು.