ಕೊಟ್ಟೂರು: ಪಟ್ಟಣದ ಪ್ರಸಿದ್ಧ, ಶ್ರೀಗುರು ಕೊಟ್ಟೂರೇಶ್ವರ (Shri Guru Kottureswara) ರಥೋತ್ಸವವು ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ಸೋಮವಾರ ಸಂಜೆ (Vijayanagara News) ನೆರವೇರಿತು.
ಸೋಮವಾರ ಸಂಜೆ ಮೂಲಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ಜಯ ಘೋಷ ಹಾಕುತ್ತಾ, ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Karnataka Weather : ಬಿಸಿಲ ಬೇಗೆಗೆ ಬೆಂದು ಸುಸ್ತಾದ ಜನರು; ಶುಷ್ಕ ವಾತಾವರಣ ಮುಂದುವರಿಕೆ
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಈ ಬಾರಿ ಅಂದಾಜು ಐದು ಲಕ್ಷಕ್ಕೂ ಅಧಿಕ ಭಕ್ತರು ಕೊಟ್ಟೂರೇಶ್ವರ ಜಾತ್ರೆಗೆ ಆಗಮಿಸಿದ್ದು, ಲಕ್ಷಾಂತರ ಭಕ್ತರು ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವನ್ನು ಕಣ್ತುಂಬಿಸಿಕೊಂಡರು. ರಥೋತ್ಸವದ ವೇಳೆ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Ballari News: ಬಳ್ಳಾರಿಯ ವಿಎಸ್‌ಕೆ ವಿವಿ ಪ್ರಭಾರ ಕುಲಪತಿಯಾಗಿ ಪ್ರೊ. ವಿಜಯಕುಮಾರ ಬಿ. ಮಲಶೆಟ್ಟಿ ನೇಮಕ
ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿ, ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು.