ಹರಪನಹಳ್ಳಿ: ಸಮಾಜವನ್ನು ಜಾತ್ಯಾತೀತವಾಗಿ ಜಾಗೃತಿಗೊಳಿಸಿದವರು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳು (Sri Yediyur Siddhalingeshwara Swamiji) ಎಂದು ಅರಸೀಕೆರೆ ಶ್ರೀ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಮಹೋತ್ಸವ ಹಾಗೂ ವೈ.ಅಣ್ಣಪ್ಪ ಪದವಿ ಕಾಲೇಜಿನ ಉದ್ಘಾಟನಾ ಸಮಾರಂಭ ಯಶಸ್ವಿಗೊಂಡ ಹಿನ್ನಲೆಯಲ್ಲಿ ರಜತ ಮಹೋತ್ಸವದ ವಿವಿಧ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೇರಿದಂತೆ ಸದಸ್ಯರುಗಳನ್ನು ಶ್ರೀಗಳು ಸನ್ಮಾನಿಸಿ, ಬಳಿಕ ಮಾತನಾಡಿದರು.
ದೇಶ ಸಂಚಾರ ಮಾಡಿ ವೀರಶೈವ ಲಿಂಗಾಯಿತ ಧರ್ಮವನ್ನು ಉನ್ನತ ಮಟ್ಟಕ್ಕೆ ತಂದವರು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳು ಎಂದ ಅವರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಪರಂಪರೆಯ ಮಠಗಳು ಹೆಚ್ಚು ಇವೆ ಎಂದು ತಿಳಿಸಿದರು.
ಇದನ್ನೂ ಓದಿ: Dasara Tour: ದಸರಾ ರಜೆಯಲ್ಲಿ ಪ್ರವಾಸ ಮಾಡ್ತೀರಾ? ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ಹೀಗಿದೆ
ಇದೇ ವೇಳೆ ಯುವ ಮುಖಂಡ ವೈ.ಡಿ.ಅಣ್ಣಪ್ಪ ಮತ್ತು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿಶಾಲಾಕ್ಷಮ್ಮ ಅವರು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ತಲಾ 75 ಸಾವಿರ ರೂಪಾಯಿ ದೇಣಿಗೆ ನೀಡಿದರು.
ಇದನ್ನೂ ಓದಿ: Viral News: ವೈದ್ಯೆಯನ್ನೇ ರಕ್ಷಿಸಿದ ಬಿಎಂಟಿಸಿ ಬಸ್ ಚಾಲಕ; ಇದು ರಿಯಲ್ ಹೀರೊನ ಕತೆ!
ಈ ಸಂಧರ್ಭದಲ್ಲಿ ಮುಖಂಡ ಎ.ಬಿ.ಪ್ರಶಾಂತ್ ಪಾಟೀಲ್, ಭೂದಾನಿ ನೆಲಗೊಂಡನಹಳ್ಳಿ ಭರತ್, ಗ್ರಾ.ಪಂ ಅಧ್ಯಕ್ಷ ಇನಾಯಿತ್‍ವುಲ್ಲಾ, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಎ.ಎಂ.ವಿಶ್ವನಾಥಯ್ಯ, ಐ.ಸಲಾಂಸಾಬ್, ಎಚ್.ನಾಗರಾಜಪ್ಪ, ತೌಡೂರ್ ಮಂಜಯ್ಯ, ನಿವೃತ್ತ ಶಿಕ್ಷಕ ಪ್ರಕಾಶ್, ಪೂಜಾರ್ ಮರಿಯಪ್ಪ, ಚಂದ್ರಪ್ಪ, ಕ್ಯಾರಕಟ್ಟಿ ಶಿವಯೋಗಿ, ಬೇವಿನಹಳ್ಳಿ ಕೆಂಚನಗೌಡ, ಕವಲಹಳ್ಳಿ ಭರ್ಮಪ್ಪ, ನಿರಂಜನ, ರಾಜಾನಾಯ್ಕ್, ಪಿಡಿಒ ಅಂಜಿನಪ್ಪ, ಎ.ಎಚ್. ಪಂಪಣ್ಣ, ಹೊಸಕೋಟೆ ನಾಗರಾಜ್ ಸೇರಿದಂತೆ ಕಾಲೇಜು ಆಡಳಿತ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.