Site icon Vistara News

Vijayanagara News: ಹೊಸಪೇಟೆಯಲ್ಲಿ ವಿಶೇಷ ಯೋಗ ಶಿಬಿರ, ಸನ್ಮಾನ ಕಾರ್ಯಕ್ರಮ

Special Yoga Camp at Hosapete

ಹೊಸಪೇಟೆ: ಜನರ ಉತ್ಸಾಹ, ಯೋಗದ (Yoga) ಕುರಿತಾದ ಕಾಳಜಿ ನೋಡಿದರೆ ಹೊಸಪೇಟೆ ಯೋಗದ ಪ್ರಯೋಗ ಶಾಲೆಯಂತೆ ಕಾಣಿಸುತ್ತಿದೆ ಎಂದು ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಉಸ್ತುವಾರಿ ಭವರ್‌ಲಾಲ್ ಆರ್ಯ (Vijayanagara News) ಹೇಳಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜನನಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಪತಂಜಲಿ ಯೋಗ ಶಿಬಿರ ಆರಂಭಗೊಂಡು ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಭಾನುವಾರ ನಡೆದ ವಿಶೇಷ ಯೋಗ ಶಿಬಿರದಲ್ಲಿ ಹರಿದ್ವಾರದಿಂದ ಅನ್‌ಲೈನ್‌ ಮೂಲಕ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿಯ ವತಿಯಿಂದ ರಾಜ್ಯದ ಎಲ್ಲೆಡೆ ಉಚಿತ ಯೋಗ ಶಿಬಿರಗಳು ನಡೆಯುತ್ತಿವೆ. ಹೊಸಪೇಟೆಯ ಯೋಗೋತ್ಸಾಹ ಇತರ ನಗರ, ಗ್ರಾಮಾಂತರ ಪ್ರದೇಶಗಳಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: OPS News : ಹಳೆ ಪಿಂಚಣಿ ಯೋಜನೆಗೆ ಅರ್ಹ ಶಿಕ್ಷಕರ ಪಟ್ಟಿ ಸಿದ್ಧಪಡಿಸಲು ಸೂಚನೆ

ಪತಂಜಲಿ ಯೋಗ ಸಮಿತಿಯ ವಿಜಯನಗರ ಮತ್ತು ಗದಗ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಅವರು ವಿಶೇಷ ತರಬೇತಿ ನಡೆಸಿಕೊಟ್ಟರು.

ರಾಜ್ಯ ಯುವ ಪ್ರಭಾರಿ ಕಿರಣ್‌ಕುಮಾರ್, ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್‌ ಕಾರ್ವಾ, ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್‌.ಟಿ.ಹಳ್ಳಿಕೇರಿ ಸಹ ಮಾರ್ಗದರ್ಶನ ನೀಡಿದರು. ಸಸ್ಯ ತಜ್ಣ ಮಾರುತಿ ಪೂಜಾರ್ ಅಗ್ನಿಹೋತ್ತ ನಡೆಸಿಕೊಟ್ಟರು.

ಸನ್ಮಾನ

ಹೊಸಪೇಟೆಯ ಹಿರಿಯ ಯೋಗ ಸಾಧಕರು ಮತ್ತು ಪತಂಜಲಿ ಯೋಗ ಸಮಿತಿಯ ಅಜೀವ ಸದಸ್ಯ ಭೂಪಾಳ ರಾಘವೇಂದ್ರ ಶೆಟ್ಟಿ, ಉಮಾ ವಿಶ್ವನಾಥ್‌, ಡಾ. ಪಿ.ಡಿ.ವಿನಾಯಕ್‌, ಅನಂತ ಪೈ, ಸುಬ್ರಾಯ ಹೆಗಡೆ, ಸತ್ಯಪ್ಪ, ಉದಯಶಂಕರ, ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಪತಂಜಲಿ ರಾಜ್ಯ ಸಮಿತಿಯ ವತಿಯಿಂದ ಅನಂತ ಜೋಷಿ ಮತ್ತು ಶ್ರೀರಾಮ್‌ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: Road Accident : ಅವಸರ ತಂದ ಆಪತ್ತು; ಬಸ್‌ ಇಳಿಯುವಾಗ ಜಾರಿ ಬಿದ್ದ ಕಂಡಕ್ಟರ್‌ನ ಕಾಲು ಕಟ್‌!

ಶೈಲಜಾ ಕಳಕಪ್ಪ ವರದಿ ವಾಚಿಸಿದರು. ಸುಜಾತಾ ಕರ್ಣಂ ಪ್ರಾರ್ಥಿಸಿದರು. ವೀರಣ್ಣ ನಿರೂಪಿಸಿದರು.

Exit mobile version