ಹೊಸಪೇಟೆ: ನಿತ್ಯ ಯೋಗ ಮಾಡುವುದು ಮತ್ತು ಇತರರೂ ಯೋಗ ಮಾಡುವಂತೆ ಪ್ರೇರಣೆಯಾಗುವುದೇ ನಾವೆಲ್ಲ ನೀಡಬಹುದಾದ ನಿಜವಾದ ಗುರುಕಾಣಿಕೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ (Vijayanagara News) ಹೇಳಿದರು.
ಇಲ್ಲಿನ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ನಡೆಯುತ್ತಿರುವ ಸಹ ಶಿಕ್ಷಕರ ಯೋಗ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರ ನಡೆಸಿ, ಸಾಮೂಹಿಕ ಅಗ್ನಿಹೋತ್ರ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: Kannada New Movie: ಗಣೇಶ್ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ʼದ್ವಾಪರ ದಾಟುತʼ ಹಾಡು ರಿಲೀಸ್!
ಹೊಸಪೇಟೆ ನಗರದ 35 ವಾರ್ಡ್‌ಗಳಲ್ಲಿ ಸಹ ಉಚಿತ ಯೋಗ ಶಿಬಿರ ಆರಂಭವಾಗಬೇಕು ಮತ್ತು ಪ್ರತಿ ಮನೆಯಲ್ಲೂ ಒಬ್ಬೊಬ್ಬ ಯೋಗ ಸಾಧಕ ತಯಾರಾಗಬೇಕು. ಈ ಸಂಕಲ್ಪವನ್ನು ಇಂದು ಮಾಡಿದರೆ ಮೂರ್ನಾಲ್ಕು ತಿಂಗಳಲ್ಲಿ ಅದು ಖಂಡಿತ ಈಡೇರುತ್ತದೆ. ಹೊಸಪೇಟೆ ನೀಡಬಹುದಾದ ಬಹುದೊಡ್ಡ ಗುರುಕಾಣಿಕೆ ಇದೇ ಎಂದು ಅವರು ಹೇಳಿದರು.
ಅಗ್ನಿಹೋತ್ರದ ನೇತೃತ್ವ ವಹಿಸಿದ್ದ ಭವರ್‌ಲಾಲ್ ಆರ್ಯ್, ಗಾಯತ್ರಿ ಮಂತ್ರದ ಅರ್ಥ ವಿವರಣೆ ನೀಡುತ್ತಲೇ ಅಗ್ನಿಹೋತ್ರ ನಡೆಸುವ ಅಗತ್ಯವನ್ನು ತಿಳಿಸಿದರು.
ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್; ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
ಈ ವೇಳೆ ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಹಿರಿಯ ಯೋಗ ಸಾಧಕರಾದ ಡಾ.ಎಫ್.ಟಿ. ಹಳ್ಳಿಕೇರಿ, ರಾಜೇಶ್ ಕರ್ವಾ, ಬಾಲಚಂದ್ರ ಶರ್ಮಾ, ಗೌರಮ್ಮ, ಮಂಗಳಮ್ಮ ಅಶೋಕ್ ಚಿತ್ರಗಾರ್, ಶ್ರೀರಾಮ್ ಹಾಗೂ ಇತರರು ಪಾಲ್ಗೊಂಡಿದ್ದರು.